ಮಹಿಳೆ, ಪುರುಷರಿಬ್ಬರೂ ಸಮಾಜದ ಪಕ್ಷಿಗೆ ಎರಡು ರೆಕ್ಕೆಗಳಿದ್ದಂತೆ: ಬಸವೇಶ್ವರಿ

0
23
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಒಂದು ಪಕ್ಷಿ ಆಕಾಶದಲ್ಲಿ ಹಾರಾಡಬೇಕಾದರೆ ಎರಡೂ ರೆಕ್ಕೆಗಳು ಬಲಿಷ್ಠವಾಗಿದ್ದರೆ ಮಾತ್ರ ಸ್ವಚ್ಛಂದವಾಗಿ ಹಾರಾಡಲು ಸಾಧ್ಯ. ಹಾಗೆಯೇ ಮಹಿಳೆ ಮತ್ತು ಪುರುಷ ಇವರಿಬ್ಬರೂ ಸಮಾಜ ಎಂಬ ಪಕ್ಷಿಗೆ ಎರಡು ರೆಕ್ಕೆಗಳಿದ್ದಂತೆ. ಎರಡೂ ಬಲಿಷ್ಠವಾಗಿದ್ದರೆ ಮಾತ್ರ ಸುಭದ್ರವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.
ಅವರು ಗುರುವಾರ ಇಲ್ಲಿನ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಸಿ.ಸಿ.ಎಫ್‌. ಲೊಯೋಲ ಜನಸ್ಪೂರ್ತಿ ಟ್ರಸ್ಟ್‌, ಲೊಯೋಲ ವಿಕಾಸ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ 108ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇಡೀ ಜಗತ್ತಿನ ಇತಿಹಾಸವನ್ನು ನಾವು ಅವಲೋಕಿಸಿದಾಗ ಪುರುಷರಿಗೆ ಸಿಗುವಷ್ಟು ಸ್ಥಾನಮಾನಗಳು ಎಲ್ಲಾ ರೀತಿಯ ಸೌಲಭ್ಯಗಳು ಮಹಿಳೆಗೆ ಸಿಕ್ಕಿಲ್ಲ. ಸಿ.ಗ್ರೆಟಾ ಮೊಂತೇರೊ ಜಾಥಾ ಉದ್ಘಾಟಿಸಿದರು. ಶಶಿಕಲಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಫಾ.ಫ್ರಾನ್ಸಿಸ್‌ ಬಾಲರಾಜ, ಫಾ.ಜೆರಾಲ್ಡ ಡಿಸೋಜಾ, ತಾ.ಪಂ ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಸಂಜೀವಿನಿ ಯೋಜನೆಯ ವಲಯ ಸಂಯೋಜಕಿ ಶ್ಯಾಮಲಾ ನಾಯ್ಕ, ಓರಲಗಿ ಪಿ.ಡಿ.ಓ. ಮಾನ್ವಿತಾ ನಾಯಕ, ಡಾ.ಶಾಂತಲಾ, ಜೆಸ್ಸಿ ಫುಲ್ಲಟ್‌, ಕೋಡಂಬಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೇಕವ್ವ ಬಡಣ್ಣನವರ, ಬಯ್ಯಾಬಾಯಿ ಕಾತ್ರಟ್‌, ತಾ.ಪಂ.ಸದಸ್ಯೆ ಸುನಿತಾ ಲಮಾಣಿ, ರೇಣುಕಾ ಕೋಡಣ್ಣವರ, ಸಂತಾನಿ ನಾರ್ಗೋಳಕರ, ಯಲ್ಲವ್ವ ಅಂಬಿಗೇರ, ಮಹಿಳಾ ಪೊಲೀಸ್‌ ಶಾಂತಲಾ ನಾಯ್ಕ ಇದ್ದರು. ಜಯಮ್ಮ ಗಾಳಪೂಜಿ ಸ್ವಾಗತಿಸಿದರು. ಫಾ.ಫ್ರಾನ್ಸಿಸ್‌ ಮೆನೆಜಸ್‌ ಪ್ರಾಸ್ತಾವಿಕ ಮಾತನಾಡಿದರು. ಮಹಾಲಕ್ಷ್ಮಿ ನಾಯ್ಕ ವರದಿ ವಾಚಿಸಿದರು. ಅನು ಜಿವಾವ್‌ ನಿರೂಪಿಸಿ ವಂದಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಘೋಷಣೆಗಳನ್ನು ಕೂಗುತ್ತ ಹೊರಟ ಜಾಥಾ ಸಭಾ ಕಾರ್ಯಕ್ರಮದ ವೇದಿಕೆ ತಲುಪಿತು.

loading...