ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ: ಪಿ.ರಾಜೀವ

0
25
loading...

ಕನ್ನಡಮ್ಮ ಸುದ್ದಿಮುಗಳಖೋಡ 04: ಈಶ್ಯಾನ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಮ್ಮದೇ ಬಿಜೆಪಿ ಸರಕಾರ ಎಂದು ಕುಡಚಿ ಶಾಸಕ ಪಿ.ರಾಜೀವ ಹೇಳಿದರು. ಅವರು ತ್ರಿಪುರ, ನಾಗಾಲ್ಯಾಂಡ ಮತ್ತು ಮೇಘಾಲಯಗಳಲ್ಲಿ ಬಿಜೆಪಿ ಭರ್ಜರಿ ಫಲಿತಾಂಶವನ್ನು ಸಾಧಿಸಿದ ಹಿನ್ನಲೆಯಲ್ಲಿ ಭಾನುವಾರದಂದು ಪಟ್ಟಣದಲ್ಲಿ ಕುಡಚಿ ಮಂಡಲದ ಬಿಜೆಪಿಯ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಆಚರಿಸಿದ ವಿಜಯೋತ್ಸವದಲ್ಲಿ ಬಾಗವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಬಸ್‌ ನಿಲ್ದಾಣದ ಹತ್ತಿರವಿರುವ ಗಜಾನನ ದೇವಸ್ಥಾನದಿಂದ ಪ್ರಾರಂಭಗೊಂಡ ಪಾದಯಾತ್ರೆ ಬಿಜೆಪಿ ಹಾಗೂ ಪಿ.ರಾಜೀವ ಪರ ಘೋಷಣೆ ಕೂಗುತ್ತ ಮಹಾಲಿಂಗಪೂರ ಕೂಡು ರಸ್ತೆಯ ಮೂಲಕ ಪ್ರವಾಸಿ ಮಂದಿರ ತಲುಪಿತು.ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ ಹೊಸಪೇಟಿ, ಪುರಸಭೆ ಅಧ್ಯಕ್ಷ ಮಹಾಂತೇಶ ಗೊಳಸಂಗಿ, ಕರೆಪ್ಪ ಮಂಟೂರ, ಕುಡಚಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಅನ್ನಪೂರ್ಣ ಯರಡೆತ್ತಿ, ಲತಾ ಹುದ್ದಾರ, ಮಂಗಳಾ ಪಣದಿ, ಕೆಂಪಣ್ಣ ಮೂಶಿ, ರಮೇಶ ಕಾಪಶಿ, ಧನಪಾಲ ಬಾಬಣ್ಣವರ, ರಾಜು ಮುಧೋಳ, ಕೆಂಪಣ್ಣ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

loading...