ಯಮಕನಮರಡಿ ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ್ಯಾಲಿ

0
63
loading...

ಯಮಕನಮರಡಿ  ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ್ಯಾಲಿ 

 

ಕನ್ನಡಮ್ಮ ಸುದ್ದಿ 

 

ಯಮಕನಮರಡಿ ೧೨: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆ ಮತ್ತು ಸಾಧನೆಯ ಮನೆ ಮನೆಗೆ ಮುಟ್ಟಿಸಲು ಕ್ಷೇತ್ರದ ದಡ್ಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು .

ರವಿವಾರ ೩೦೦ ಕ್ಕೂ ಹೆಚ್ಚು ಬೈಕ್ ಮೂಲಕ ನಾಗರಮುನ್ನೋಳಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ಮತ್ತು ಮುಖಂಡ ಮಾರುತಿ ಅಸ್ಟಗಿ ಅವರ ನೇತೃತ್ವದಲ್ಲಿ ಬೃಹತ ಬೈಕ್ ರ್ಯಾಲಿ ನಡೆಸಿ ಮಾತನಾಡಿದ ಪವನ ಕತ್ತಿ ಇಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಅವರು ಶ್ರಮಿಸುತ್ತಿದ್ದಾರೆ ದೀನ ದಲಿತರ ಏಳ್ಗೆಗಾಗಿ ಕೇಂದ್ರ ಸರಕಾರ ಹಲವಾರು ಯೋಜನೆಗಳ ಮೂಲಕ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ ಅದೆ ರೀತಿ ರಾಜ್ಯದಲ್ಲಿಯೂ ಬರುವ ವಿಧಾನ ಸಭೆ ಚುನಾವಣಾಯಲ್ಲಿ ಕಮಲ ಅರಳಿಲಿದು ರಾಜ್ಯದ ಅಭಿವೃದ್ಧಿಗೆ ಈ ಬಾರಿ ಎಲ್ಲರೂ ಶ್ರಮಿಸಬೇಕೆಂದರು .ಮುಖಂಡರಾದ ಮಾರುತಿ ಅಸ್ಟಗಿ ಮಾತನಾಡಿ ಯಮಕನಮರಡಿ ಕ್ಷೇತ್ರ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಬಿದಿದೆ ಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು  ಈ ನಿಟ್ಟಿನಲ್ಲಿ ಎಲ್ಲರೂ ಕಮಲ ಅರಳಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದರು .ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಈರಣ್ಣ ಹಾಲದೇವರಮಠ,ರವಿ ಕುರಾಡೆ ಸಂತೋಷ ಮಲಾಜ ಬಸವರಾಜ ಶೇಖನವರ,ಯಲ್ಲಪ್ಪಾ ನಾಯಿಕ ಮುಂದಾದವರು ಉಪಸ್ಥಿತರಿದ್ದರು .

loading...