ಯಮಕನಮರ್ಡಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಕಾರ್ಯಗಳು: ಶಾಸಕ ಸತೀಶ

0
33
loading...

 

ಕನ್ನಡಮ್ಮ ಸುದ್ದಿ-ಗೋಕಾಕ: ಯಮಕನಮರ್ಡಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಮುಂಬರುವ ದಿನಗಳಲ್ಲಿ ಯಮಕನಮರ್ಡಿ ಮತಕ್ಷೇತ್ರವು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಅವರು ಮಂಗಳವಾರ ಸಮೀಪದ ಹತ್ತರಗಿ ಗ್ರಾಮದ ಬಳಿ ಎಮ್ ಬಿ ಮೋಟಾರ್ಸ ಮೊಬೈಲ್ ವರ್ಕಶಾಪ್ ಉದ್ಘಾಟನೆ ನೆರವೆರಿಸಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಮ್ ಬಿ ಮೋಟಾರ್ಸ ವತಿಯಿಂದ ನೂರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿರುವ ಜೊತೆ ಜೊತೆಗೆ ಡ್ರೈವಿಂಗ ಟ್ರೇನಿಂಗ್ ಸೇಂಟರ್ ಮಾಡುವ ಗುರಿ ಹೊಂದಿರವದು ಹೆಮ್ಮೆಯ ವಿಷಯ ಎಂದರು.
ಎಮ್ ಬಿ ಮೋಟಾರ್ಸ ಮಾಲಿಕ ಆನಂದ ಮಜಲಿಕರ ಹಾಗೂ ಮ್ಯಾನೇಜರ್ ಜಾಫರ್ ಸೇರಿದಂತೆ ಇತರರು ಇದ್ದರು.

loading...