ಯುಗಾದಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0
30
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ ಉತ್ಸವವನ್ನು ಅದ್ದೂರಿಯಿಂದ ನಾಲ್ಕು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದೆ ಎಂದು ಯುಗಾದಿ ಉತ್ಸವ ಸಮಿತಿಯ ಸಂಚಾಲಕ ಯೋಗೇಶ ಹಿರೇಮಠ ಹೇಳಿದರು. ಅವರು ಮಂಗಳವಾರ ಪಟ್ಟಣದ ಪತ್ರಕರ್ತರ ಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಅವರು ಈ ನಿಮಿತ್ತ ಮಾ .15 ರಂದು ಉತ್ಸವದ ಜಾಗೃತಿಗಾಗಿ ಕಾಳಮ್ಮ ನಗರದಿಂದ ಸಂಜೆ 4.15 ಕ್ಕೆ ಬೃಹತ್ ಬೈಕ್ ರ್ಯಾಲಿಯನ್ನು ಪ್ರಮುಖ ರಸ್ತೆಗಳಲ್ಲಿ ಏರ್ಪಡಿಸಲಾಗಿದೆ. ಸುಮಾರು 3000 ಸಾವಿರ ಬೈಕ್ ಸವಾರರು ಭಾಗವಹಿಸುವ ನಿರೀಕ್ಷೆ ಇದೆ. ಮಾ 18 ರಂದು ಪಟ್ಟಣದ ಕೋಟೆ ಕರಿಯವ್ವ ದೇವಸ್ಥಾನದಿಂದ ಭವ್ಯ ಶೋಭಾ ಯಾತ್ರೆ ನಡೆಯಲಿದ್ದು ಜಾಂಜ ಪತಾಕ್, ಚಂಡೆವಾದ್ಯ ಹಗೂ ವಿವಿಧ ರೀತಿಯ ಟ್ಯಾಬ್ಲೋ, ವಾದ್ಯ ತಂಡಗಳು ಭಾಗವಹಿಸುವವು,ಹಾಗೂ ಈ ಬಾರಿ ಮಹಿಳೆಯರಿಗಾಗಿ ಪ್ರತ್ಯೇಕ ಡಿಜೆ ಒದಗಿಸಲಾಗುವದು. ಮಹಿಳೆಯರು ಮುಜುಗರ ಮುಕ್ತವಾಗಿ ಹಾಡಿಗೆ ಹೆಜ್ಜೆ ಹಾಕುತ್ತಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಬಹುದಾಗಿದೆ . ಸಂಜೆ 6ಗಂಟೆಗೆ ಬೆಂಗಳೂರಿನ ಗೌರಿಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.7.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ವೇ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಪಂಚಾಂಗ ಪಠಣ ಮಾಡುವರು. ಅತಿಥಿಗಳಾಗಿ , ವನವಾಸಿ ಕಲ್ಯಾಣ ಸಂಸ್ಥೆಯ ಶಾಂತಾರಾಮ ಸಿದ್ದಿ ,ಗ್ರಾಮ ದೇವಿ ದೇವಸ್ಥಾನದಟ್ರಸ್ಟಿ ನಾಗೇಶ ಕೃಷ್ಣ ಭಾಗ್ವತ, ಆನಗೋಡ ಗೋಪಾಲಕೃಷ್ಣ ದೇವಸ್ಥಾನ ಧರ್ಮದರ್ಶಿ ಗಣಪತಿ ಮಾನಿಗದ್ದೆ ಪಾಲ್ಗೊಳ್ಳುವರು.
ಮಾ. 19 ರಂದು ಧರ್ಮ ಜಾಗೃತಿ ಉಪನ್ಯಾಸ ಸಂಜೆ 6.30 ಕ್ಕೆ ಶ್ರೀ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ನಡೆಯಲಿದೆ. ಹಿಂದೂ ಯುವ ವಾಹಿನಿಯ ಚೈತ್ರಾ ಕುಂದಾಪುರ, ವೀರ ಸಂದೇಶ ನೀಡುವರು. ಅತಿಥಿಗಳಾಗಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ರಾಜೇಂದ್ರ ಪ್ರಸಾಧ ಭಟ್ಟ, ನಿವೃತ್ತ ಸರ್ಕಾರಿ ಅಧಿಕಾರಿ ಗೋಪಾಲ ಕೃಷ್ಣ ಬೇಕಲ್ ಪಾಲ್ಗೊಳ್ಳುವರು.ನಂತರ ಸ್ಥಳೀಯ ಹಾಗೂ ಧಾರವಾಡ ಕಲಾವಿದರಿಂದ ಸಾಂಸ್ಕøತಿಕ ನೃತ್ಯ ಕಾರ್ಯಕ್ರಮ ನಡೆಯಲಿದೆ. , ಸಮಿತಿಯ ಅಧ್ಯಕ್ಷ ಜಿ.ಎನ್.ಗಾಂವ್ಕರ ,ಮಹಿಳಾ ಸಂಚಾಲಕಿ ನಮಿತಾ ಬೀಡಿಕರ, ಶೋಭಾ ಹುಲಮನಿ ಖಜಾಂಚಿ ಪ್ರದೀಪ ಯಲ್ಲಾಪುರಕರ, ಶ್ರೀನಿವಾಸ ಗಾಂವ್ಕರ, ಸೋಮೆಶ್ವರ ನಾಯ್ಕ, ಪ್ರಸಾದ ಹೆಗಡೆ ಇದ್ದರು.

loading...