ಯುವಕರು ಸ್ವಯಂ ಉದ್ಯೋಗ ಪ್ರಾರಂಭಿಸಿ: ಬೊಮ್ಮಾಯಿ

0
24
loading...

ಕನ್ನಡಮ್ಮ ಸುದ್ದಿ-ಬಂಕಾಪುರ : ವಿದ್ಯಾರ್ಥಿಗಳು ಬರಿ ಸರಕಾರಿ ನೌಕರಿಗೆ ಅವಲಂಬಿತರಾಗದೆ ಕೌಶಲ್ಯ ತರಬೇತಿತನ್ನು ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸಿ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಭಾರತದಲ್ಲಿ ಸ್ವಯಂ ಉದ್ಯೋಗದ ಮುಕ್ತತೆ ಮತ್ತು ಅವಕಾಶಗಳು ಎಂಬ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಕರು ಉದ್ಯೋಗವನ್ನು ಸೃಷ್ಠಿಸುವ ಖಾರ್ಖಾನೆಗಳಾಗಬೇಕೇ ಹೊರತು ಸರಕಾರದ ಉದ್ಯೋಗಕ್ಕೆ ಕಾಯ್ದು ಕಾಲಹರಣ ಮಾಡಬಾರದು. ಯುವಕರು ಆತ್ಮ ಸೆüೈರ್ಯದಿಂದ ಛಲ ಬೀಡದೆ ಮುನ್ನುಗ್ಗಿದಾಗ ಎಸಸ್ಸು ನಿಮ್ಮ ಹೇಗಲೇರಲಿದೆ ಎಂದು ಹೇಳಿದರು.
ದಾವಣಗೇರಿ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿ.ಪಿ.ವೀರಭದ್ರಪ್ಪ ಮಾತನಾಡಿ ಸರಕಾರ ಎಲ್ಲರಿಗೂ ಉದ್ಯೋಗ ನೀಡಲು ಸಾದ್ಯವಿಲ್ಲ. ಭಾರತದಲ್ಲಿ ಸ್ವಯಂ ಉದ್ಯೋಗಮಾಡಲು ವಿಫುಲ ಅವಕಾಶಗಳಿವೆ. ಆದರೆ ಯುವಕರು ಕೌಶಲ್ಯ ತರಬೇತಿಯನ್ನು ಪಡೆಯದೆ ಸ್ವಯಂ ಉದ್ಯೋಗದಲ್ಲಿ ವಿಫಲರಾಗುತ್ತಿದ್ದಾರೆ ಇಂದಿನ ಯುವಜನಾಂಗ ಸರಕಾರ ನೀಡುವ ಸಹಾಯ ಧನಕ್ಕಾಗಿ ಅವಲಂಬಿತರಾಗದೆ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿ ಇತರರಿಗೆ ಉದ್ಯೋಗವನ್ನು ನೀಡುವಂತಾದಾಗ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಇತರ ದೇಶಗಳಿಗೆ ಸಾಲ ಕೊಡುವಂತಾಗಲಿದೆ ಎಂದು ಹೇಳಿದರು.

ಬಿಲ್‍ಗ್ರೇಟ್ಸ್ ರವರು ಕೇವಲ ಬಿಕಾಂ ಶಿಕ್ಷಣವನ್ನು ಪುರೈಸಿ ಇಡಿ ವಿಶ್ವದಲ್ಲಿಯೇ ಕಂಪ್ಯೂಟರ ಕ್ರಾಂತಿಯನ್ನು ಮೊಳಗಿಸಿ ಕೊಟ್ಯಾಂತರ ಜನರ ಕೈಗೆ ಉದ್ಯೋಗವನ್ನು ಸೃಷ್ಠಿಸಿ ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೊಳಗಿಸಿದ ಮಹಾ ಛೇತನರಾಗಿದ್ದಾರೆ. ಅವರಿಗಿದ್ದ ಅಂಗವಿಕಲತೆಯನ್ನು ಮೇಟ್ಟಿ ನಿಂತು ಆಕಾಶದೆತ್ತರಕೆ ಬೆಳೆದು ಯುವ ಸಮೂಹಕ್ಕೆ ಸ್ಪೂರ್ತಿಯ ಸೇಲೆಯಾಗಿ ನಿಂತಿದ್ದಾರೆ ಎಂದು ಹೇಳಿದರು.
ಧಾರವಾಡ ವಿಶ್ವ ವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾರ್ಜುನ ಪಾಟೀಲ ಹಾಗು ಪ್ರೋ. ಯಮುನಾ ಕೋಣೇಸರ್ ಮಾತನಾಡಿದರು. ವಿಚಾರ ಸಂಕೀರ್ಣ ದಲ್ಲಿ ಮಹರಾಷ್ಟ್ರ ನಾಲ್ಕು ವಿದ್ಯಾರ್ಥಿಗಳು ಸೇರಿದಂತೆ ಶಿವಮೊಗ್ಗಾ, ಡಾವಣಗೇರಿ, ಹಾವೇರಿ, ಕಾರವಾರ, ಗದಗ, ಧಾರವಾಡ ಜಿಲ್ಲೆಗಳಿಂದ ಒಟ್ಟು 72 ವಿದ್ಯಾರ್ಥಿಗಳು ಬಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನವನ್ನು ಹಾವೇರಿಯ ಜಿ.ಎಫ್.ಜಿ.ಸಿ ಕಾಲೇಜಿನ ಶ್ವೇತಾ, ದ್ವಿತೀಯ ಸ್ಥಾನವನ್ನು ಹಾವೇರಿ ಕೇರಿಮತ್ತಿಹಳ್ಳಿ ಪಿ.ಜಿ. ಸೆಂಟರಿನ ಮಲ್ಲನಗೌಡ, ತೃತೀಯ ಸ್ಥಾನವನ್ನು ಅದೇ ಕೇರಿಮತ್ತಿಹಳ್ಳಿ ಪಿ.ಜಿ.ಸೆಂಟರಿನ ಸಂಗೀತಾ ಪಡೆದು ಕೊಂಡರು. ಸಮಾರೋಪ ಸಮಾರಂಬದಲ್ಲಿ ವಿಜೇರನ್ನು ಸನ್ಮಾನಿಸಿ ಗೌರವ ಕಾಣಿಕೆಯನ್ನು ನೀಡಿ ಪ್ರೋತ್ಸಾಹಿಸಿದರು.

ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಪಂಚಾಕ್ಷರಯ್ಯ ಸಭೆಯ ಅದ್ಯಕ್ಷತೆ ವಹಿಸಿದ್ದರು. ಪ್ರೋ. ಡಿ.ಎಸ್.ಸೊಗಲದ, ಕೆ.ಪಿ.ಬೆಣಗೇರಿ, ಗೌಸಿಯಾಭಾನು, ಬಸವರಾಜ ಡಮನಾಳ, ವಿಜಯಲಕ್ಷ್ಮೀ, ರಘುಪತಿ, ವಿಜಯ್ ಗುಡಗೇರಿ, ಉಮೇಶ ಕರ್ಜಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಲುಬ್ನಾನಾಜ್ ಸ್ವಾಗತಿಸಿದರು. ಸುಜಾತಾ ಕಡ್ಲಿ ನಿರೂಪಿಸಿದರು. ಸಂತೋಷಕುಮಾರ ಕಟಕೆ ವಂದಿಸಿದರು.

loading...