ಯುವ ಜನತೆ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಿ: ವಾಳ್ಕೆ

0
16
loading...

ಕುಮಟಾ: ಕ್ರೀಡೆಗೆ ಪೂರಕವಾಗಿ ಉದ್ಯೋಗ ಸೃಷ್ಟಿ ಆದರೆ ಉದ್ಯೋಗದ ಜೊತೆಗೆ ಕ್ರೀಡೆಯು ಬೆಳೆಯುತ್ತದೆ ಎಂದು ಬಿಜೆಪಿ ಮುಖಂಡ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅಭಿಪ್ರಾಯ ಪಟ್ಟರು.
ಅವರು ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕ್ರೀಡೆಗಳು ಮಾನವನ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಇಂತಹ ಕ್ರೀಡಾ ಕಾರ್ಯಕ್ರಮಗಳು ತೀರಾ ಅಗತ್ಯವಾಗಿವೆ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ದೇಹಕ್ಕೆ ವ್ಯಾಯಾಮ ದೊರೆಯುತ್ತದೆ. ಯುವ ಜನತೆ ಕ್ರೀಡೆಗಳಿಗೂ ಕೂಡಾ ಪ್ರಾಮುಖ್ಯತೆ ನೀಡುವ ಮನೋಭಾವನೆ ಬೆಳೆಸಬೇಕು ಎಂದರು.
ಮಾಜಿ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ಪರ್ಧಾಳುಗಳು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದೊಂದಿಗೆ ನಿರ್ಣಾಯಕರ ನಿರ್ಣಯಗಳಿಗೆ ಬದ್ಧರಾಗಬೇಕು ಎಂಬ ಕಿವಿಮಾತು ನುಡಿದರು. ಹಾಗೂ ಇಂತಹ ಕ್ರೀಡಾ ಚಟುವಟಿಕೆಗಳಿಗೆ ತಮ್ಮ ಪೋತ್ಸಾಹ ಸದಾ ಇರಲಿದೆ ಎಂದರು. ಮಾಜಿ ಜಿ ಪಂ ಸದಸ್ಯ ಕೃಷ್ಣ ಗೌಡ, ಉದ್ಯಮಿ ವಿಷ್ಣು ಪಟಗಾರ, ಪ್ರಮುಖರಾದ ಜಿ ಕೆ ಪಟಗಾರ, ದತ್ತಾ ಪಟಗಾರ ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.

loading...