ಯುವ ಜನರು ಚರಿತ್ರೆ ಮರೆತರೆ ತಮ್ಮನ್ನು ತಾವು ಮರೆತಂತೆ: ಮರೆತಂತೆ

0
31
loading...

ಕನ್ನಡಮ್ಮ ಸುದ್ದಿ- ಧಾರವಾಡ: ನಾಟಕದಲ್ಲಿ ಶರಣ ಸಾಹಿತ್ಯವನ್ನು ಅಳವಡಿಕೆ ಮಾಡಿ ಜನರಲ್ಲಿ ಸಾತ್ವಿಕ ಚಿಂತನೆ ಮನೋಭಾವನೆ ಬಿತ್ತಿದ ದಿ.ಬಿ. ಶಿವಶಂಕರ ಸದಾ ಸ್ಮರಣೀಯರು ಎಂದು ಚಲನಚಿತ್ರ ನಿರ್ಮಾಪಕ ಚಿಂದೋಡಿ ಬಂಗಾರೇಶ ಅಭಿಪ್ರಾಯಪಟ್ಟರು. ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಿಶ್ವಭಾರತಿ ರಮ್ಯ ನಾಟಕ ಸಂಘ ಏರ್ಪಡಿಸಿದ ಚಾರಿತ್ರಿಕ ನಾಟಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕನ್ನಡ ವೃತ್ತಿ ರಂಗಕ್ಕೆ ಅಪಾರ ಕೊಡುಗೆ ನೀಡಿ ಐತಿಹಾಸಿಕ ನಾಟಕಗಳನ್ನು ರಚನೆ ಮಾಡಿ ಜನ ಸಾಮಾನ್ಯರ ಮನ ಗೆದ್ದಿರುವ ಶಿವಶಂಕರ ಅವರನ್ನು ರಂಗಭೂಮಿ ಕಲಾವಿದರು ಎಂದಿಗೂ ಮರೆಯಲಾರರು. ನವಲಗುಂದ ನಾಗಲಿಂಗ ಲೀಲೆ ನಾಟಕದ ಮೂಲಕ ಪರಿಚಯಗೊಂಡ ಅವರು ಅದ್ಬುತ ಕಲಾವಿದರು.
ಕನ್ನಡದ ಅಕ್ಷರಗಳೇ ಅವರಿಗೆ ತಾಯಿ ರಂಗಭೂಮಿ ಅವರ ತಂದೆ ಎಂದು ಭಾವಿಸಿದ್ದರು ಎಂದರು. ಕÀನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಮರೆತಂತೆ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುವ ರಂಗ ಕಲಾವಿದರು ಗ್ರಾಮೀಣ ಭಾಗದಲ್ಲಿ ಅಷ್ಟೆ ಅಲ್ಲದೇ ಶಹರದಲ್ಲೂ ಹೆಚ್ಚಾಗಿದ್ದಾರೆ. ಮುಂಬರುವ ಪೀಳಿಗೆಗೆ ನಾಟಕ ಹಾಗೂ ಚಾರಿತ್ರಿಕ ದರ್ಶನ ಮಾಡಿಸುವ ಅವಶ್ಯಕತೆಯಿದೆ. ಮಕ್ಕಳು ಯುವಜನರು ಚರಿತ್ರೆಯನ್ನು ಮರೆತರೆ ತಮ್ಮನ್ನು ತಾವು ಮರೆತಂತೆ ಎಂದರು. ಸಂಶೋಧಕ ಡಾ.ವೀರಣ್ಣ ರಾಜೂರ ಮಾತನಾಡಿ, ಪ್ರತಿಯೊಬ್ಬ ಮಾನವನಲ್ಲಿ ಅರಿವು ಜನ್ಮಜಾತವಾಗಿ ನೆಲೆಸಿರುವುದು. ಶ್ರೇಯಸ್ಸು ಅವನ ದೃಢತೆಯನ್ನು ಅವಲಂಬಿಸಿದೆ ಗುರು ಶರಣರು, ಸಂತರು, ದಾರ್ಶನಿಕರ, ಮಹಾತ್ಮರ ಮಹತ್ವದ ಸಂದೇಶಗಳು ನಮಗೆ ಸಹಾಯಕರವಾಗುತ್ತವೆ.
ಯಾವ ವಿಷಯದಲ್ಲಿ ನಮಗೆ ಯಾರಿಂದ ಜ್ಞಾನದ ಪ್ರಕಾಶ ದೊರೆಯುತ್ತದೆಯೋ ಆಗ ನಮ್ಮ ಅಜ್ಞಾನದ ಅಂಧಕಾರ ದೂರವಾಗಲು ಸಾಧ್ಯ. ಸದ್ವಿವಿಚಾರದ ಜ್ಞಾನ ಬಂಡಾರ ತುಂಬಿಕೊಳ್ಳಬೇಕು ಜೊತೆಗೆ ಬುದ್ದಿ ಹಾಗೂ ಮನಸ್ಸನ್ನು ಸಾರಥಿಯನ್ನಾಗಿ ಇಟ್ಟುಕೊಳ್ಳಬೇಕು ಎಂದರು. ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷತೆವಹಿಸಿದ್ದರು. ಶಿವಣ್ಣ ಬೆಲ್ಲದ, ಬಸವರಾಜ ದೊಡಮನಿ ಉಪಸ್ಥಿತರಿದ್ದರು. ಬಸವರಾಜ ಬೆಂಗೇರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರಭು ಹಂಚಿನಾಳ ನಿರೂಪಿಸಿದರು.

loading...