ರವಿಕಿರಣಗೆ 14 ಚಿನ್ನದ ಪದಕ

0
19
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಲ್ಲಿ ಸನ್‌ 2016-17ನೇ ಸಾಲಿನ ಬಿಎಸ್ಸಿ (ತೋಟಗಾರಿಕೆ) ಸ್ನಾತಕ ಪದವಿಯಲ್ಲಿ ರವಿಕಿರಣ ಎ.ಆರ್‌ ಎಂಬ ವಿದ್ಯಾರ್ಥಿ ಶೇ.92.20 ಅಂಕಗಳನ್ನು ಪಡೆಯುವ ಮೂಲಕ ತೋವಿವಿಯ ಉದ್ಯಾನಗಿರಿಯಲ್ಲಿ ಶನಿವಾರ ನಡೆದ 7ನೇ ಘಟಿಕೋತ್ಸವದಲ್ಲಿ ಒಟ್ಟು 14 ಚಿನ್ನದ ಪದಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಇತನು ಮೂಲತಃ ಬೆಂಗಳೂರು ಜಿಲ್ಲೆಯ ಆನೆಕಲ್ಲು ತಾಲೂಕಿನ ಕಚನಾಯಕನಹಳ್ಳಿಯವನಾಗಿದ್ದು, ಬಿ.ಎಸ್ಸಿ (ತೋಟಕಾರಿಗೆ) ನಾಲ್ಕನೇ ವರ್ಷದಲ್ಲಿ ಮಾರ್ಪಾಡಿಸುವ ಪೋಸ್ಟ್‌ ಹಾರ್ವೇಸ್ಟಿಂಗ್‌ ತಂತ್ರಜ್ಞಾನದಲ್ಲಿ ತೋಟಗಾರಿಕೆ ಪ್ರಾಯೋಗಿಕ ಕಲಿಕೆಯನ್ಮ್ನ ಯಶಸ್ವಿಯಾಗಿ ಪೂರೈಸಿದ್ದಾನೆ. ಜಿಲ್ಲೆಯ ಚಿಕ್ಕಸಂಗಮದಲ್ಲಿ ತೋವಿವಿ ಆಯೋಜಿಸಿದ ಗ್ರಾಮೀಣ ತೋಟಗಾರಿಕೆ ಕೆಲಸದ ಅನುಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮಹಾಲಿಂಗಪೂರದ ರೋಹಿಣಿ ಬಯೋಟೆಕ್‌ ಲಿಮಿಟೆಡ್‌ ನವರು ನಡೆಸಿದ ಪಿಶು ಕಲ್ಚರ ಪ್ಲಾಂಟ್ಸ್‌ ಪ್ರೋಡಕ್ಷನ್‌ ಮತ್ತು ಬಯೋಪರ್ಟಿಲೈಜರ್ಸ್‌ ಮಾಸ್ಕ ಪ್ರೋಡಕ್ಷನ್‌ದಲ್ಲಿ 1 ತಿಂಗಳ ತರಬೇತಿಯಲ್ಲಿ ಭಾಗವಹಿಸಿದ್ದಾನೆ.
ಸ್ನಾತಕೋತ್ತರ ಪದವಿಯಲ್ಲಿ ಬಸಪ್ಪ ಬಂಡಿ, ರುಚಿತ ಟಿ ಎಂಬ ವಿದ್ಯಾರ್ಥಿಗಳು ತಲಾ 4 ಚಿನ್ನದ ಪದಕ ಪಡೆದುಕೊಂಡರೆ, ಲಾವಣ್ಯ ಎಸ್‌ 3, ಶ್ರೀಧರ ನರಸಿಂಸ ಹೆಗಡೆ, ಪವನ್‌ U್ಷಡ, ಜಶ್ವಿತಾ ಬಿ.ಪಿ ತಲಾ 2 ಮತ್ತು ಚೈತ್ರ ಎಚ್‌.ಪಿ, ಐಶ್ವರ್ಯ ಕಮ್ಮಾರ, ರೇವಣಸ್ವಾಮಿ ಕೆ.ಎಂ, ಮಾನಸ ಎನ್‌.ಎಸ್‌ ತಲಾ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಎಂ.ಎಸ್ಸಿ (ತೋಟಗಾರಿಕೆ) ವಿಜ್ಞಾನ ವಿಭಾಗದ ನಸ್ರತ ಪರವೀಣ ಎಂಬ ವಿದ್ಯಾರ್ಥಿ 7 ಚಿನ್ನದ ಪದಕಗಳನ್ನು ಪಡೆದುಕೊಂಡರೆ, ಜ್ಯೋತಿ ವರ್ಮಾ 3, ಶ್ವೇತಾ ಎ, ಕಾವ್ಯ ಕೆ.ಆರ್‌., ಅನುಶ್ರೀ ಆನಂದ ತಲಾ ಎರಡು ಹಾಗೂ ನೇಖಾ ಥನಾರಿ, ನವ್ಯಶ್ರೀ ಎಸ್‌.ಈ, ಪೂರ್ಣಿಮಾ ಎಸ್‌, ದೇವರಾಜ ಎ.ಎನ್‌, ರಾಜಶ್ರೀ ಶೇಷಗಿರಿ ತಲಾ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಪಿ.ಎಚ್‌.ಡಿಯಲ್ಲಿ ಚಂದ್ರಶೇಖರ ಎಸ್‌.ವೈ ಎಂಬ ವಿದ್ಯಾರ್ಥಿ 3 ಚಿನ್ನದ ಪದಕ ಪಡೆದುಕೊಂಡಿದ್ದಾರೆ.

loading...