ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಶಿವರಾಮ

0
24
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಬಿ.ಜೆ.ಪಿಯವರು ಯಲ್ಲಾಪುರವನ್ನು ಇಲ್ಲಗಳ ಪುರವೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸಂದೇಶ ನೀಡಿ, ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಬಿ.ಜೆ.ಪಿ ವಾಸ್ತವಿಕ ಸ್ಥಿತಿ-ಗತಿಗಳನ್ನು ಮುಚ್ಚಿಡುತ್ತಿದ್ದಾರೆ. ಎಂದು ಶಾಸಕ ಶಿವರಾಮ ಹೆಬ್ಬಾರ ಆರೋಪಿಸಿದರು.
ಪಟ್ಟಣದ ಬೆಲ್‌ ರಸ್ತೆ ಮತ್ತು ಮುಂಡಗೋಡ ರಸ್ತೆಗಳ ಅಭಿವೃದ್ಧಿಗಾಗಿ ಲೊಕೋಪಯೋಗಿ ಇಲಾಖೆ 1 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ಶಾಸಕನಾಗುವ ಮುನ್ನ 21 ವರ್ಷಗಳ ಸುದೀರ್ಘ ಅವಧಿಯಲ್ಲಿ ಬಿ.ಜೆ.ಪಿ ಶಾಸಕರೇ ಯಲ್ಲಾಪುರವನ್ನು ಪ್ರತಿನಿಧಿಸಿದ್ದಾರೆ. ಅಂದಿನ ತಾಲೂಕಿನ ಸ್ಥಿತಿಯನ್ನು ಸ್ಮರಿಸಿಕೊಳ್ಳಬೇಕಾದ ಪ್ರಜ್ಞಾವಂತರೆಲ್ಲರೂ, ನನ್ನ 5 ವರ್ಷದ ಅಧಿಕಾರಾವಧಿಯಲ್ಲಿ ಮಾಡಿದ ವಿವಿಧ ಅಭಿವೃದ್ಧಿಗಳನ್ನು ಗಮನಿಸಲಿ ಎಂದ ಅವರು, ಪ್ರಜ್ಞಾವಂತರಾದ ನಮ್ಮ ಕ್ಷೇತ್ರದ ಮತದಾರರು ನನ್ನ ಅಭಿವೃದ್ಧಿಯ ಕುರಿತು ವಿಮರ್ಶಿಸುವ ಬಿ.ಜೆ.ಪಿಯವರಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಶಿರೀಷ ಪ್ರಭು, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೆಶಕ ವಿಜಯ ಮಿರಾಶಿ, ಲೋಕೋಪಯೋಗಿ ಇಲಾಖೆಯ ಎಇಇ ಎಸ್‌.ಎಸ್‌.ಜಿಗಳೂರ್‌, ವಿಶಾಲ್‌ ಕಠಾವಕರ್‌, ಗುತ್ತಿಗೆದಾರ ಸುಧೀರ ಪಂಡಿತ್‌, ಪ್ರಮುಖರಾದ ಜಗದೀಶ ದೀಕ್ಷಿತ್‌, ಮಾಧವ ನಾಯಕ ಮತ್ತಿತರರು ಉಪಸ್ಥಿತರಿದ್ದರು.

loading...