ರಸ್ತೆ ಕಾಮಗಾರಿ ತನಿಖೆಗೆ ಆಗ್ರಹಿಸಿ ರುದ್ರಪ್ಪ ಧರಣಿ

0
16
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ : ಚೌಡಾಪೂರು ದಿಂದ ಯಡ್ಡೋಣಿ ನಿರ್ಮಿಸಲಗುತ್ತಿರುವ ಡಾಂಬರಿಕರಣ ರಸ್ತೆ ಕಿರಿದಾಗಿ ಕಾಮಗಾರಿ ನಡೆಸಲಾಗಿದೆ.ಇದರಿಂದಾಗಿ ರಸ್ತೆಯಲ್ಲಿ ಹೋಗುವ ವಾಹನಗಳಿಗೆ ತುಂಬ ತೊಂದರೆಯಾಗುತ್ತಿದೆ. ಈ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದಲ್ಲದೆ,ಇದರಲ್ಲಿ ಅವ್ಯವಹಾರ ನಡೆಸಿದ್ದು,ಕೂಡಲೇ ಸಂಬಂದಿಸಿದ ಗುತ್ತಿಗೆದಾರರನ್ನು,ಮತ್ತು ಎಂಜನೀಯರನ್ನು ಅಮನತ್ತು ಮಾಡುವಂತೆ ಆಗ್ರಹಿಸಿ ತಾಪಂ ಸದಸ್ಯರೊಬ್ಬರು ಸಭೆಯಲ್ಲಿ ಧರಣಿ ಕುಳಿತ ಪ್ರಸಂಗ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ಲೋಕೋಪಯೋಗಿ ಅಧಿಕಾರಿ ಉಮಾಪತಿ ಶೆಟ್ಟರ ತಮ್ಮ ಇಲಾಖೆವಾರು ವರದಿಯನ್ನು ಓದುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಹಿರೇವಂಕಲಕುಂಟ ಕ್ಷೇತ್ರದ ಸದಸ್ಯ ರುದ್ರಪ್ಪ ಮರಕಟ್ಟು ಮಾತನಾಡಿ,ತಾಲೂಕಿನ ಚೌಡಾಪುರ ಮತ್ತು ಯಡ್ಡೋಣಿ ಮಾರ್ಗವಾಗಿ ನಿರ್ಮಿಸಿದ ಡಾಂಬರೀಕರಣ ಕಾಮಗಾರಿಗೆ ಇದ್ದ ಸುಮಾರು 1ಕೋಟಿ 40ಲಕ್ಷ ಅನುದಾನವನ್ನು ರಸ್ತೆಯಲ್ಲಿ ಕೇವಲ 12ಫೂಟ ಡಾಂಬರೀಕರಣ ನಿರ್ಮಿಸಿದ ಗುತ್ತಿಗೆದಾರನಿಗೆ ಸರಕಾರದ ಹಣ ದುರ್ಬಳಕೆ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿ ಉಮಾಪತಿ ಶೆಟ್ಟರ್‌ ಅವರು ಅನುವು ಮಾಡಿಕೊಟ್ಟಿದ್ದಾರೆ ಎಂದು ತಾಲೂಕ ಪಂಚಾಯತ ಸಭೆಯಲ್ಲಿ ಸದಸ್ಯ ರುದ್ರಪ್ಪ ಮರಕಟ್‌ ಆರೋಪಿಸಿದರು.
ನಿರ್ಮಿಸಲಾದ ಈ ರಸ್ತೆಯು ಅಂದಾಜು ಪತ್ರಿಕೆಯನ್ನು ಲೆಕ್ಕಿಸದೆ ಕಾಮಗಾರಿ ಪೂರ್ಣಗೊಂಡಿದೆ ತಾಲೂಕಿನ ಬೆರೆಡೆ ರೈತರು ರಸ್ತೆ ಕಬಳಿಸಿದ್ದಾರೆ ಎಂದು ಪ್ರಕರಣ ದಾಖಲಿಸುವ ಅಧಿಕಾರಿಗಳು ರೈತರು ತಡೆ ಒಡ್ಡಿದರು ಎಂಬ ಕುಂಟುನೆಪವನ್ನು ಹೇಳುತ್ತಿರುವ ಅಧಿಕಾರಿಗಳು ಈ ಬಿಲ್‌ ಎತ್ತುವಳಿಯಲ್ಲಿ ಪಾಲುದಾರರಾಗಿದ್ದಾರೆ. ಅತ್ಯಂತ ಚಿಕ್ಕದಾದ ಈ ಡಾಂಬರ ರಸ್ತೆಯಲ್ಲಿ ಬೈಕ್‌ ಸವಾರರ ಅಪಘಾತಗಳು ನಡೆಯುತ್ತಿವೆ ಎದುರಿಗೆ ಬರುವ ವಾಹನಕ್ಕೆ ಜಾಗೆಯೇ ಇಲ್ಲದಂತೆ ರಸ್ತೆ ನಿರ್ಮಿಸಿದ್ದು ಎಷ್ಟು ಸರಿ? ಇನ್ನು ಈ ರಸ್ತೆ ನಿರ್ಮಿಸಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಮತ್ತು ಕಾಮಗಾರಿಗೆ ಅನುವು ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ರುದ್ರಪ್ಪ ಮರಕಟ್‌ ಸಭೆಯಲ್ಲಿ ಕೆಳಗೆ ಕುಳಿತು ಪ್ರತಿರೋಧ ವ್ಯಕ್ತಪಡಿಸಿದ ಬಳಿಕ ಅಧ್ಯಕ್ಷೆ ಲಕ್ಷ್ಮೀ ದ್ಯಾಮಪ್ಪಗೌಡ್ರ ಅವರ ಸೂಚನೆಯ ಮೆರೆಗೆ ಡಾಂಬರ ರಸ್ತೆ ಸ್ಥಳ ಪರಿಶೀಲಿಸುವಂತೆ ಹೇಳಲಾಯಿತು. ಸಭೆಗೆ ಮಾಹಿತಿ ನಿಡಿದ ಎಇ ಉಮಾಪತಿ ಶೆಟ್ಟರ್‌ ಈ ಕಾಮಗಾರಿಯಲ್ಲಿ ಯಾವುದೆ ರಿತಿಯ ಅವ್ಯವಹಾರವಾಗಲಿ ಬೋಗಸ್‌ ಆಗಲಿ ಆಗಿರುವದಿಲ್ಲ ರಸ್ತೆ ಕಿರಿದಾಗಲು ಅಲ್ಲಿನ ರೈತರು ಕಾರಣ ನಾವು ಸಾಕಷ್ಟು ರೀತಿಯಲ್ಲಿ ಮನವೋಲಿಸಲು ಪ್ರಯತ್ನಿಸಿ ವಿಫಲವಾದೆವು ರೈತರು ಒಂದಿಂಚೂ ಭೂಮಿಯನ್ನು ಬಿಟ್ಟುಕೊಡಲು ತಯಾರಿಲ್ಲಾ ಕಾಮಗಾರಿ ನಿರ್ವಹಿಸಿದಷ್ಟೆ ನಾವು ಬಿಲ್‌ ಮಾಡಿದ್ದೆವೆ ಒಂದು ವೇಳೆ ರೈತರ ಮನವೋಲಿಸಿ ಅಕ್ಕ_ಪಕ್ಕ ಜಾಗ ಕೊಡಿಸಿದಲ್ಲಿ ಒಂದು ವಾರದಲ್ಲಿ ರಸ್ತೆಯನ್ನು ಅಗಲಿಕರಣ ಮಾಡಿ ಕೊಡಲಾಗುವದು ಎಂದರು. ನಂತರ ಧರಣಿಯನ್ನು ಸದಸ್ಯ ರುದ್ರಪ್ಪ ಕೈಬಿಟ್ಟರು.
ತಾಪಂ ಸದಸ್ಯ ಗೌರಮ್ಮ ನಾಗನೂರು ಮಾತನಾಡಿ ಬನ್ನಿಕೊಪ್ಪ ಗ್ರಾಮದಲ್ಲಿ ಕಡಲೆ ಖರಿದಿ ಕೇಂದ್ರ ಪ್ರಾರಂಭವಾಗಿರುವದಿಲ್ಲಾ ಇದರಿಂದ ನಮ್ಮ ಬಾಗದ ರೈತರಿಗೆ ತುಂಬಾ ತೊಂದರೆಯಾಗಿದ್ದು ಬೆಗನೆ ಪ್ರಾರಂಬಿಸುವಂತೆ ಒತ್ತಾಯಿಸಿದರು.ತಳಕಲ್‌ ತಾ.ಪಂ.ಸದಸ್ಯ ಶಿವಕುಮಾರ ಆದಾಪೂರ ಶರಣಪ್ಪ ಈಳಗೇರ ಮಾತನಾಡಿ.ನಮ್ಮ ತಾಲೂಕಿನ ರೈತರು ಪ್ರತಿ ವರ್ಷ ಬೆಳೆವೀಮಾ ತುಂಬುತ್ತಿದ್ದಾರೆ ಆದರೆ ಇಲ್ಲಿಯವರೆಗೂ ಯಾವ ರೈತರಿಗೂ ವೀಮಾ ಹಣ ಬಂದಿರುವದಿಲ್ಲಾ ಇದಕ್ಕೆಲ್ಲಾ ಯಾರು ಹೋಣೆ ಎಂದು ತಹಸಿಲ್ದಾರರನ್ನು ಪ್ರಶ್ನೀಸಿದರು. ನಂತರ ಮಾತನಾಡಿದ ತಹಸಿಲ್ದಾರ ರಮೇಶ ಅಳವಂಡಿಕರ್‌, ಇದರ ಬಗ್ಗೆ ಇಗಾಗಲೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅವರು ವಿಮಾ ತುಂಬಿಸಿಕೊಂಡ ಕಂಪನಿಯವರಿಗೆ ನೋಟಿಸ್‌ ಜಾರಿಮಾಡಿದ್ದಾರೆ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಒದಗಿಸಿಕೊಡಲಾಗುವದು ಎಂದರು.
ತಾ.ಪಂ.ಅದ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ ಮಾತನಾಡಿ, ತಾಲೂಕಿನ 60 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇದುವರೆಗೊ ಎಸ್‌ಡಿಎಂಸಿ ರಚನೆ ಇಲ್ಲ ಹೀಗಾದರೆ ಶಾಲಾ ಮಕ್ಕಳಿಗೆ ಸಮವಸ್ತ್ರ,ಶೂ ಸೇರಿದಂತೆ ವಿವಿಧ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಇದಕ್ಕೆ ಯಾರು ಹೊಣೆ..? ಅದಷ್ಟು ಬೇಗನೆ ಶಾಲಾಭಿವೃದ್ದಿ ಸಮಿತಿ ನೇಮಿಸಿ ಎಂದಾಗ ಬಿಇಒ ಶರಣಪ್ಪ ವಟಗಲ್‌ ಮಾತನಾಡಿ ಇಗಾಗಲೆ ಸಂಭಂದಿಸಿದ ಶಾಲೆಗೆ ಬೇಟಿ ನೀಡಿ ರಚಿಸಲು ತಿಳಿಸಲಾಗಿದೆ ಎಂದರು.
ಪಶು ವೈದ್ಯಾಧಿಕಾರಿ ಡಾ ಬಸಯ್ಯ ಸಾಲಿ ಮಾತನಾಡಿ ತಾಲೂಕಿನಲ್ಲಿ ತಮ್ಮ ಇಲಾಖೆಯಿಂದ ಮಾಡಿದ ವಿವಿಧ ಕಾರ್ಯಗಳು ಹಾಗೂ ಜಾನುವಾರುಗಳಿಗೆ ಹಾಕಿದ ಲಸಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುರೇಖಾ ಕುರಟ್ಟಿ ಮಾತನಾಡಿ ತಾಲೂಕಿನ ಎಲ್ಲ ಎಸ್ಸಿ,ಎಸ್ಟಿ,ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಅವರವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಹೇಳಿದರು. ವಿವಿಧ ಇಲಾಖೆವಾರು ಅಧಿಕಾರಿಗಳು ವರದಿಯನ್ನು ಓದಿದರು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಲಕ್ಷ್ಮೀ ಗೌಡರ ವಹಿಸಿದ್ದರು, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸುಭಾಸ ಮಾದಿನೂರು,ಇಓ ಕೆ.ತಿಮ್ಮಪ್ಪ,ತಹಶೀಲ್ದಾರ ರಮೇಶ ಅಳವಂಡಿಕರ ಉಪಸ್ಥಿತರಿದ್ದರು.

loading...