ರಾಜ್ಯದಲ್ಲಿ ನ್ಯಾಯಯುತ ಚುನಾವಣೆ ನಡೆಯುವ ವಿಶ್ವಾಸವಿಲ್ಲ : ಸಚಿವ ಅನಂತಕುಮಾರ

0
17
loading...

ಕನ್ನಡಮ್ಮ ಸುದ್ದಿ-ಕುಮಟಾ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾಂಗ್ರೆಸ್‌ ಸರ್ಕಾರ ಇಡೀ ರಾಜ್ಯವನ್ನು ಅಪರಾಧಿಕರಣ ಮಾಡಿದೆ. ಮೋದಿಯನ್ನು ನರಹಂತಕ ಎಂದ ಸಿದ್ಧರಾಮಯ್ಯ ಅವರಿಗೆ ಅವರ ಭಾಷೆಯಲ್ಲಿಯೇ ಉತ್ತರಿಸಬೇಕಾಗಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ವಾಗ್ದಾಳಿ ನಡೆಸಿದರು.
ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಶನಿವಾರ ಬಿಜೆಪಿ ಹಮ್ಮಿಕೊಂಡಿರುವ ಜನ ಸುರಕ್ಷಾ ಯಾತ್ರೆಗೆ ಅವರು ಪಾಲ್ಗೊಂಡು ನಂತರ ಪಟ್ಟಣದ ಗಿಬ್‌ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಕೊಲೆ, ದರೋಡೆ, ಮೋಸ, ವಂಚನೆಯ ಪ್ರಕರ್ಣಗಳ ಪ್ರಮಾಣ ಕಲ್ಪನೆಗೂ ಮೀರಿ ಹೆಚ್ಚಾಗಿದೆ. ರಾಜ್ಯದಲ್ಲಿ ಈ ಬಾರಿ ನ್ಯಾಯಯುತ ಚುನಾವಣೆ ನಡೆಯುವ ಬಗ್ಗೆ ವಿಶ್ವಾಸವಿಲ್ಲ. ಸಿದ್ದರಾಮಯ್ಯ ಅವರ ಮುಖ ಕನ್ನಡಿಯಲ್ಲಿ ಕಂಡರೆ ರಾಕ್ಷಸೀಯ ಮುಖವಾಗಿ ಕಾಣುತ್ತದೆ. ಮಠ ಮಂದಿರಗಳ ಮಸೂದೆ ಮಂಡನೆಗೆ ಮುಂದಾದ ಸರ್ಕಾರಕ್ಕೆ ಅಲ್ಪ ಸಂಖ್ಯಾತ ಎಂಜಲಿನ ವೋಟಿಲ್ಲದೇ ಗೆಲ್ಲಲು ಸಾಧ್ಯವಿಲ್ಲ. 70 ವರ್ಷ ದೇಶವನ್ನಾಳಿದ ಕಾಂಗ್ರೇಸ್ಸಿನ ಯುಪಿಎ ಅವಧಿಯ ಕೊನೇಯ ಪ್ರಧಾನ ಮಂತ್ರಿಗೆ ತಲೆ ಎತ್ತಿ ನಿಲ್ಲುವ ಯೋಗ್ಯತೆ ಇಲ್ಲ. ವಿಶ್ವ ಪ್ರಧಾನ ಮಂತ್ರಿ ಮೋದಿಯವರ ಸಲಹೆ ಕೇಳುವ ಮಟ್ಟಕ್ಕೆ ದೇಶದ ಸ್ವಾಭಿಮಾನವನ್ನು ಬೆಳೆದಿದೆ. ಮೋದಿ ಸರ್ಕಾರ ದೇಶಕ್ಕೆ ಗೌರವನ್ನು ತಂದುಕೊಟ್ಟಿದೆ. ಸಬ್‌ ಕೇ ಸಾಥ ಸಬ್‌ ಕಾ ವಿಕಾಸ್‌ ಎನ್ನುವುದು ಬಿಜೆಪಿ ಸ್ಲೋಗನ್‌ ಆದರೆ, ಸಿದ್ಧರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ಅಪನಾ ಸ್ವಾರ್ಥ ಸಬ್‌ ಕಾ ವಿಕಾಸ್‌ ಆಗಿದೆ. ಸಿದ್ಧರಾಮಯ್ಯ ಅವರಿಗೆ ಖುರ್ಚಿಯಲ್ಲಿ ಕುಳಿತುಕೊಳ್ಳುವ ಯೋಗ್ಯತೆಯನ್ನು ಕಳೆದುಕೊಂಡಿದ್ದಾರೆ. ಸಿದ್ಧರಾಮಯ್ಯ ಸರ್ಕಾರ ಹುಚ್ಚರತರ ವರ್ತಿಸುತ್ತಿದ್ದು, ಜನರಿಗೆ ಜವಾಬ್ದಾರಿ ಇದೆ ಅಂತಾದರೇ ಸಿದ್ಧರಾಮಯ್ಯ ಅವರಿಗೆ ತಕ್ಕ ಉತ್ತರ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ, ಪ್ರಮುಖರಾದ ಸುಬ್ರಾಯ ವಾಳ್ಕೆ, ಸೂರಜ ನಾಯ್ಕ ಸೋನಿ, ಅಶೋಕ ಪ್ರಭು, ಯಶೋಧರ ನಾಯ್ಕ, ದಿನಕರ ಶೆಟ್ಟಿ, ಸುನೀಲ ಹೆಗಡೆ, ನಾಗರಾಜ ನಾಯಕ, ಡಾ ಜಿ ಜಿ ಹೆಗಡೆ, ವೆಂಕಟರಮಣ ಹೆಗಡೆ, ಎಸ್‌.ಟಿ ನಾಯ್ಕ, ತಿಮ್ಮಪ್ಪ ಮುಕ್ರಿ, ಪ್ರಶಾಂತ ನಾಯ್ಕ, ವೀಣಾ ಸೂರಜ ನಾಯ್ಕ, ಗಜಾನನ ಪೈ, ಗಾಯತ್ರಿ ಗೌಡ, ವಿಶ್ವನಾಥ ನಾಯ್ಕ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಜನ ಸುರಕ್ಷಾ ಯಾತ್ರೆ ಕುಮಟಾಕ್ಕೆ ಆಗಮಿಸುತ್ತಿದ್ದಂತೆ ಸ್ಥಳೀಯ ಬಿಜೆಪಿ ಮುಖಂಡರು ಸ್ವಾಗತಿಸಿದರು. ಪಟ್ಟಣದ ಹೆಗಡೆ ಕ್ರಾಸ್‌ನ ಬಿಜೆಪಿ ಕಚೇರಿಯಿಂದ ಆರಂಭವಾದ ಮೆರವಣಿಗೆ ಹಳೆ ಬಸ್‌ ನಿಲ್ದಾನ, ಬಸ್ತಿ ಪೇಟೆ, ಮೂರುಕಟ್ಟೆ, ರಥಬಿದಿ, ಸುಭಾಸ ರಸ್ತೆ ಮಾರ್ಗವಾಗಿ ಗಿಬ್‌ ಪ್ರೌಢ ಶಾಲೆಯ ಆವರಣದಲ್ಲಿ ಸಮಾವೇಶಗೊಂಡಿತು.
ಲಕ್ಷ್ಮೀನಾರಾಯಣ ಹೆಗಡೆಕರ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ಅಂಬಿಗ ಕಾರ್ಯಕ್ರಮ ನಿರೂಪಿಸಿದರು. ತಾಲೂಕಾಧ್ಯಕ್ಷ ಕುಮಾರ ಮಾರ್ಕಾಂಡೆ ವಂಸಿದಿರು.

loading...