ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕೆಂದು ಮನವಿ

0
17
loading...

ಕನ್ನಡಮ್ಮ ಸುದ್ದಿ-ಶಿರಸಿ: ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಖಂಡಿಸುವ ಜೊತೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಆಗಬೇಕು ಎಂದು ಎಬಿವಿಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಶಿರಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಎಬಿವಿಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಶಿರಸಿ ವಿಭಾಗ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಕಂಡಿ ಮಾತನಾಡಿ, ರಾಜ್ಯ ಸರ್ಕಾರವು ಅನೇಕ ಸಮಸ್ಯೆಗಳಿಗೆ ಹೊಣೆಯಾಗಿರುವುದರಿಂದ ಈ ಸರ್ಕಾರವು ತೊಲಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕು. ಜನ ಸಾಮಾನ್ಯರು, ಅಧಿಕಾರಿಗಳು, ಮಹಿಳೆಯರು, ಮಕ್ಕಳಿಗೆ ರಕ್ಷಣೆ ಕೊಡದ ಕೊಲೆಗೈಯ್ಯುತ್ತಿರುವ ಬ್ರಷ್ಟ ಕಾಂಗ್ರೆಸ್‌ ಸರ್ಕಾರ ತೊಲಗಬೇಕು ಎಂದರು. ಬೆಂಗಳೂರಿನಲ್ಲಿ ಹಾಡುಹಗಲೇ ಕರ್ನಾಟಕ ಲೋಕಾಯುಕ್ತದ ನ್ಯಾಯಮೂರ್ತಿಗಳಾದ ನ್ಯಾ. ವಿಶ್ವನಾಥ ಶೆಟ್ಟಿ ಅವರನ್ನು ಹತ್ಯೆಗೈಯಲು ಪ್ರಯತ್ನಿಸಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿಯಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಮಲ್ಲಿಕಾರ್ಜುನ ಬಂಡೆ, ಡಿ.ಕೆ ರವಿ, ಗಣಪತಿ ಹೆಗಡೆ ಮುಂತಾದ ಪ್ರಾಮಾಣಿಕ ಅಧಿಕಾರಿಗಳಾದ ಕೊಲೆ, ಆತ್ಮಹತ್ಯೆ, ಬೆದರಿಕೆ ಮತ್ತು ವರ್ಗಾವಣೆ ಪ್ರಕರಣಗಳು ಸಾಮಾನ್ಯ ಸಂಗತಿಯಾಗಿದೆ.
ಪ್ರತಿಭಟನೆಯಲ್ಲಿ ಎ.ಬಿ.ವಿ.ಪಿ ಕಾರ್ಯಕರ್ತರಾದ ಜಿಲ್ಲಾ ಸಂಚಾಲಕ್‌ ಗಣಪತಿ ತೇತಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶೋಭಾ ಗೌಡ, ಹೇಮಂತ ಕಾರ್ತಿಕ್‌, ಶ್ರೀಧರ, ಗೌತಮಿ, ಮಧುಕೇಶ್ವರ, ಗಣೇಶ ಪಟಗಾರ, ಸುಮನಾ ನಾಯ್ಕ, ರಾಧಾ, ಯಮುನಾ, ತನುಜಾ, ಸೀಮಾ, ಶ್ರೀನಿಧಿ, ವೈಷ್ಣವಿ, ಪವಿತ್ರಾ ಶ್ರೀಲಕ್ಷ್ಮೀ, ಸೌಮ್ಯ, ಕಲಾವತಿ, ರಮ್ಯಾ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

loading...