ರಾಜ್ಯ ಸರಕಾರ ಕೇಂದ್ರದ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ಜಾರಿಗೆ ತಂದಿಲ್ಲ: ಸಂಸದ ಅಂಗಡಿ

0
33
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ರಾಜ್ಯದಲ್ಲಿ ವೀರಶೈವ ಲಿಂಗಾಯತರುನ್ನು ಒಡೆದು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಿದ ರಾಜ್ಯ ಸರಕಾರ ಕಸಾಯಿಖಾನೆಯ ಪ್ರಕರಣವನ್ನು ಮುಂದಿಟ್ಟುಕೊಂಡು ಬೆಳಗಾವಿ ನಗರ ಪೋಲಿಸ್ ಆಯುಕ್ತ ಡಾ. ಡಿ.ಸಿ.ರಾಜಪ್ಪ ಅವರ ವರ್ಗಾವಣೆಯಲ್ಲಿ ರಾಜ್ಯ ಸರಕಾರ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಆರೋಪಿಸಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮತೀರ್ಥ ನಗರದಲ್ಲಿನ ಅನಧಿಕೃತ ಕಸಾಯಿ ಖಾನೆಗಳ ವಿರುದ್ಧ ಪ್ರಾಮಾಣಿಕ ತನಿಖೆ ನಡೆಸುತ್ತಿರುವ ನಗರ ಪೊಲೀಸ್ ಆಯುಕ್ತರ ವರ್ಗಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂಪ್ಪಯ್ಯ ಕೈವಾಡವಿದೆ. ಜಿಲ್ಲೆಯಲ್ಲಿದ್ದ ಲಿಂಗಾಯತ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಪೊಲೀಸ್ ಆಯುಕ್ತರ ವರ್ಗಾವಣೆಯನ್ನು ರದ್ದು ಪಡೆಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರಕಾರ ಕೇಂದ್ರದ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ಜಾರಿಗೆ ತರುತ್ತಿಲ್ಲ. ಈಗಾಗಲೆ ರೈತರಿಗಾಗಿ ಜಾರಿಗೆ ತಂದ ಪಸಲ್ ಭೀಮಾ ಯೋಜನೆ ಅಡಿಯಲ್ಲಿ 108 ಕೋಟಿ ರು.ಗಳನ್ನು ಬೆಳಗಾವಿ ಜಿಲ್ಲೆಗೆ ನೀಡಲಾಗಿದೆ. ಆದರೆ ಕೃಷಿ ಇಲಾಖೆ ಸದ್ಬಳಕೆ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಹಾಗೂ ಸರಕಾರ ಕೂಡ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಲ್ಲಿ ನಿಶ್ಕಾಳಜಿ ತೊರುತ್ತಿದೆ ಎಂದು ಆರೋಪಿಸಿದರು.
ಒಂದು ತಿಂಗಳಿನಿಂದ ರೈತರ ಖಾತೆಗೆ ಹಣ ಜಮಾ ಮಾಡಿಸುವ ಬಗ್ಗೆ ಪಾಲೊಆಪ್ ಮಾಡಿದರು ಕೂಡ ರಾಜ್ಯ ಸರಕಾರ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಆದ್ದರಿಂದ ಕೂಡಲೆ ರಾಜ್ಯ ಸರಕಾರ ರೈತರ ಖಾತೆಗೆ ಯೋಜನೆಯ ಕಂತುಗಳನ್ನು ಅವರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಎಂಎಸ್‍ಪಿ ಅನ್ವಯ 2150 ರೂ. ಗಳಿದ್ದ ಜೋಳದ ಬೆಲೆ ಇಂದು 1100 ರಿಂದ 1500 ರೂ. ಬೆಲೆ ಕುಸಿದ ಪರಿಣಾಮ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಸಂಕಷ್ಟದಲ್ಲಿರುವ ರೈತರನ್ನು ಸರಕಾರ ಬದುಕಿಸಬೇಕಾದರೆ ಪ್ರತಿಯೊಂದು ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸುವಂತೆ ಸಂಸದ ಸುರೇಶ ಅಂಗಡಿ ಆಗ್ರಹಿಸಿದರು.
ಶಾಸಕ ಡಾ. ವಿಶ್ವನಾಥ ಪಾಟೀಲ, ಈರಣ್ಣಾ ಕಡಾಡಿ, ರಾಜೇಂದ್ರ ಹರುಕುಣಿ, ರಾಜಕುಮಾರ ಟೋಪಣ್ಣವರ, ಡಾ. ರವಿ ಪಾಟೀಲ ಸೇರಿದಂತೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...