ರಾಮನವಮಿ ಅಂಗವಾಗಿ ಹಿಂಜಾವೇ ಯಿಂದ ಬೈಕ್‌ ರ್ಯಾಲಿ

0
18
loading...

ಕನ್ನಡಮ್ಮ ಸುದ್ದಿ-ಕಾರವಾರ: ರಾಮನವಮಿ ಅಂಗವಾಗಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಗರದಲ್ಲಿ ದ್ವಿಚಕ್ರ ವಾಹನದ ಶೋಭಾಯಾತ್ರೆ ನಡೆಯಿತು.
ಇಲ್ಲಿನ ಮಿತ್ರಸಮಾಜ ಆವರಣದಲ್ಲಿ ಸೇರಿದ 300 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ದ್ವಿಚಕ್ರ ವಾಹನದ ಶೋಭಾಯಾತ್ರೆಗೆ ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿಯವರು ಆಶೀರ್ವಚನಗೈದು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಬಾಳು ಪೈ ಮಾತನಾಡಿ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಈ ದೇಶದ ಜನರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದಿದ್ದಾನೆ. ರಾಷ್ಟ್ರದ ಸಂಸ್ಕೃತಿಯ ಎಲ್ಲ ಸದ್ಗುಣಗಳ ಪ್ರತಿಬಿಂಬವಾಗಿರುವ ಶ್ರೀರಾಮಚಂದ್ರ ಎಲ್ಲರಿಗೂ ಸ್ಪೂರ್ತಿದಾಯಕನಾಗಿದ್ದಾನೆ. ಜಗತ್ತಿನ ಆದರ್ಶ ಪುರುಷನಿಗೆ ಅಯೋಧ್ಯೆಯಲ್ಲಿ ಭವ್ಯವಾದ ಮಂದಿರ ನಿರ್ಮಿಸುವುದು ಪ್ರತಿಯೊಬ್ಬ ಹಿಂದೂವಿನ ಕನಸಾಗಿದೆ. ಆದಷ್ಟು ಶೀಘ್ರ ಶ್ರೀರಾಮ ಮಂದಿರ ಕಟ್ಟುವ ಕನಸು ನನಸಾಗಿಸಬೇಕು ಎಂದರು.
ಆನಂತರ ಕೋಡಿಬಾಗ ತನಕ ಶೋಭಾಯಾತ್ರೆಯು ಮುಂದುವರಿದು, ಕೋಡಿಬಾಗದಿಂದ ನೇರವಾಗಿ ಟೋಲ್‌ನಾಕಾ, ನಂದನಗದ್ದಾ, ಸುಂಕೇರಿ, ಕಡವಾಡ, ಶಿರವಾಡ ಮಾರ್ಗವಾಗಿ ಸಾಗಿ ಮತ್ತೆ ನಗರದ ಮಿತ್ರ ಸಮಾಜ ಆವರಣಕ್ಕೆ ಬಂದು ತಲುಪಿತು. ಶೋಭಾ ಯಾತ್ರೆಯಲ್ಲಿ ಜೈ ಶ್ರೀರಾಮ್‌, ಮಂದಿರ ಅಲ್ಲೇಕಟ್ಟುವೆವು ಎಂಬ ಘೋಷಣೆ ಮುಗಿಲು ಮುಟ್ಟಿತು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ನಗರ ಸಂಚಾಲಕ ಸಾಗರ್‌ ಕುಡ್ತಳಕರ, ವಿಶ್ವ ಹಿಂದೂ ಪರಿಷತ್‌ನ ಪ್ರಮುಖ ಬಿ.ಜಿ.ಮೋಹನ್‌, ನ್ಯಾಯವಾದಿ ಧನಲಕ್ಷಿ÷್ಮ ಹಳದನಕರ, ಸುನೀಲ ನಾಯ್ಕ ಮುಡಗೇರಿ, ವಿಷ್ಣು ಗಾಯಕ, ನಾಗರಾಜ ಜೋಶಿ, ರತನ್‌ ದುರ್ಗೇಕರ, ರಾಮನಾಥ್‌ ಪರುಳೇಕರ, ದಿಲೀಪ್‌ ನಾಯ್ಕ, ಮಹೇಶ ಹರಿಕಂತ್ರ ಮುಂತಾದವರು ಹಾಜರಿದ್ದರು.

loading...