ರಾಷ್ಟ್ರ ಮಟ್ಟದ ಸಾಂಸ್ಕøತಿಕ ಉತ್ಸವ

0
26
loading...

ಕನ್ನಡಮ್ಮ ಸುದಿ- ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಇನ್ಸಿಗ್ನಿಯಾ-2018 ಉತ್ಸವ ಮಾರ್ಚ 15 ರಿಂದ 18 ರ ವರೆಗೆ ಜರುಗಲಿದೆ ಎಂದು ಎಸ್.ಡಿ.ಎಂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ವಣಕುದುರೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇನ್ಸಿಗ್ನಿಯಾದ ಈ 7ನೇಯ ಆವೃತ್ತಿ ಉತ್ಸವದಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಸುಮಾರು 2 ಸಾವಿರ ವಿದ್ಯಾರ್ಥಿಗಳು 60 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ರಸಪ್ರಶ್ನೆ, ಪ್ರಬಂಧ ಮಂಡನೆ, ರೋಬೋಟಿಕ್ಸ ಮುಂತಾದ ತಾಂತ್ರಿಕ ಸ್ಪರ್ಧೆಗಳು ಮತ್ತು ಸಂಗೀತ, ನೃತ್ಯ, ನಾಟಕ ಹಾಗೂ ಲಲಿತ ಕಲೆಗಳಂತಹ ಸಾಂಸ್ಕ್ರತಿಕ ಸ್ಪರ್ಧೆಗಳು ಜರುಗಲಿವೆ ಎಂದರು. ಮಾ. 15 ರಂದು ಸಂಜೆ 5.30 ಕ್ಕೆ ಮಾರುತಿ ಸಾಂಬ್ರಾಣಿ, ಜಂಟಿ ಆಯುಕ್ತರು, ಕರ್ನಾಟಕ ಸಾರಿಗೆ ವಿಭಾಗ,ಕರ್ನಾಟಕ ಸರಕಾರ, ಹುಬ್ಬಳ್ಳಿ ಇವರು ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಆಯುಕ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅತಿಥಿಯಾಗಿ ಪಾಲ್ಗೊಳ್ಳುವರು. ಜೀವಂಧರ್ ಕುಮಾರ, ಕಾರ್ಯದರ್ಶಿಗಳು, ಎಸ್.ಡಿ.ಎಮ್.ಇ. ಸೊಸೈಟಿ ಅಧ್ಯಕ್ಷತೆವಹಿಸಲಿದ್ದಾರೆ. ಬಾಲಿವುಡ್ ಹಾಡುಗಾರ ಶ್ರೀರಾಮಚಂದ್ರ ಹಾಗೂ ಅವರ ತಂಡದಿಂದ ಸಂಗೀತದ ರಸದೌತಣ ಉಣಬಡಿಸಲಿದೆ ಎಂದರು. ಬೃಹತ್ ಸೈಕಲ್ ರ್ಯಾಲಿಯನ್ನು ಡಿಕೇಥ್ಲಾನ್, ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ಮತ್ತು ಧಾರವಾಡ ಸೈಕ್ಲಿಂಗ್ ಕ್ಲಬ್ ಇವರ ಸಹಯೋಗದಲ್ಲಿ ಏರ್ಪಡಿಸಲಾಗುತ್ತಿದ್ದು ಸೈಕಲ್‍ನ ಆವಿಷ್ಕಾರದ 200 ನೇ ವರ್ಷದ ಆಚರಣೆಯ ಅಂಗವಾಗಿ ಸೈಕಲ್ಲಿನ ಉಪಯೋಗದಿಂದಾಗುವ ಆರೋಗ್ಯಕರ ಪರಿಣಾಮದ ಬಗ್ಗೆ ಕಾರ್ಯಾಗಾರ, ಸೈಕಲ್‍ನ ಜೋಡಣೆಯ ತಾಂತ್ರಿಕ ಅಂಶಗಳ ಚರ್ಚೆ, ಸ್ಲೋ ಸೈಕ್ಲಿಂಗ್ ಸ್ಪರ್ಧೆ ಜರುಗಲಿದೆ. ಸೈಕಲ್ ರ್ಯಾಲಿಯ ಉದ್ಘಾಟನೆ ಹವ್ಯಾಸಿ ಸೈಕಲ್ ಸ್ಪರ್ಧಿ ಮುರುಗೇಶ್ ಚನ್ನಣ್ಣವರ ಟ್ರಾಫಿಕ್ ಪೋಲಿಸ್ ಇನ್‍ಸ್ಪೆಕ್ಟರ್ ಇವರು ನೆರವೇರಿಸಲಿದ್ದಾರೆ.
ಇದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಎಸ್.ಡಿ.ಎಮ್.ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಧಾರವಾಡ ಸಿವಿಲ್ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದೆ. ಎಸ್. ಡಿ.ಎಮ್.ವೈದ್ಯಕೀಯ ಮಹಾವಿದ್ಯಾಲಯದ ಉಪ-ಪ್ರಾಚಾರ್ಯ ಡಾ.ಯು.ಎಸ್.ದಿನೇಶ ಶಿಬಿರ ಉದ್ಘಾಟಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಕೆ.ಗೋಪಿನಾಥ, ಪ್ರೊ.ಮಹೇಂದ್ರ, ಮ.ದೀಕ್ಷಿತ ಉಪಸ್ಥಿತರಿದ್ದರು.

loading...