ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಆಗ್ರಹ “ರಾಷ್ಟ್ರೀಯ ಬಸವಸೇನೆಯಿಂದ ಮುಖ್ಯಮಂತ್ರಿಯವರಿಗೆ ಮನವಿ”

0
136
loading...

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಆಗ್ರಹ

“ರಾಷ್ಟ್ರೀಯ ಬಸವಸೇನೆಯಿಂದ ಮುಖ್ಯಮಂತ್ರಿಯವರಿಗೆ ಮನವಿ”

 

ಕನ್ನಡಮ್ಮ ಸುದ್ದಿ

 

ಹುಕ್ಕೇರಿ 12:ಕರ್ನಾಟಕ ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ನೀಡಿ ಕೇಂದ್ರ ಸರಕಾರಕ್ಕೆ ಶಿಪಾರಸು ಮಾಡಬೇಕೆಂದು ಆಗ್ರಹಿಸಿ ಹುಕ್ಕೇರಿ ತಾಲೂಕ ರಾಷ್ಟ್ರೀಯ ಬಸವಸೇನೆ ಸಂಘದವರು ತಹಶಿಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮ್ಯನವರಿಗೆ ಮನವಿ ಸಲ್ಲಿಸಿದರು.

ಸೋಮವಾರ ತಾಲೂಕ ಬಸವ ಸೇನೆ ಅಧ್ಯಕ್ಷ ಸಂತೋಷ ಮುಡಶಿ ನೇತೃತ್ವದಲ್ಲಿ ತಹಶಿಲ್ದಾರ ಕಚೇರಿ ಮುಂದೆ ಜಮಾಯಿಸಿದ ಸಂಘದ ಕಾರ್ಯಕರ್ತರು ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕು ಎಂದು ಘೋಷಣೆ ಕೂಗಿ ಉಪ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂತೋಷ ಮುಡಶಿ ಮಹಾ ಮಾನವತಾವಾದಿ ಬಸವಣ್ಣನವರಿಂದ ಸ್ಥಾಪಿತವಾದ ಜಾತಿ,ವರ್ಣ, ಮತ್ತು ವರ್ಗ ರಹಿತವಾದ ಲಿಂಗಾಯತ ಧರ್ಮವು ವೀರಶೈವ ಹಾಗೂ ಹಿಂದೂ ಧರ್ಮಕ್ಕಿಂತ ಎಲ್ಲ ರೀತಿಯಿಂದಲೂ ಭಿನ್ನವಾಗಿದೆ,ಸ್ವತಂತ್ರವಾಘಿ ಈ ಧರ್ಮಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಬೇಕೆಂಬುವುದು ಲಿಂಗಾಯತರ ಬಹು ದಿನಗಳಿಂದ ಹೋರಾಟ ಮಾಡುತ್ತಿದಾರೆ ಆದ್ದರಿಂದ ತಾವುಗಳು ಕರ್ನಾಟಕ ಅಲ್ಪಸಂಖ್ಯಾಯತ ಆಯೋಗ ಕಾಯ್ದೆ 1994 ಕಲಂ 2 ಡಿ ಕಾಯ್ದೆ ಪ್ರಕಾರ ಲಿಂಗಾಯತರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಿ ಸಾಂವಿಧಾನಿಕ ಮಾನ್ಯತೆ ನೀಡಲು ಕೇಂದ್ರೆ ಶಿಪಾರಸು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಎಸ್,ಎಮ್ ಶಿರೂರು,ಮಹಾಂತೇಶ ಕಾಡಗಿ,ಮಹಾಂತೇಶ ಚೌಗಲಾ,ಚನ್ನಗೌಡ ಪಾಟೀಲ,ಗಣೇಶ ಪಾಟೀಲ,ಆನಂದ ವೈರಾಗಿ,ಅಮೀತ ಸುಳದಾಳೆ,ದಿಲೀಪ ಹೊಸಮನಿ,ಬಾಳಾಸಾಹೇಬ ಉರಬನಟ್ಟಿ,ಲಖಮಗೌಡ ಪಾಟೀಲ,ಸದಾಶಿವ ಪಾಟೀಲ,ರಾಜು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

loading...