ವಚನಕ್ರಾಂತಿಯ ಪುನರುತ್ಥಾನ ಕಾರ್ಯಕ್ರಮ

0
9
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಉತ್ತರಕನ್ನಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ‘ವಚನಕ್ರಾಂತಿಯ ಪುನರುತ್ಥಾನ’ ವಿಷಯದ ಕುರಿತು ವಿಚಾರ ಸಂಕಿರಣವು ಬುಧವಾರ ವೀರಕ್ತಮಠದ ಪ್ರಾಂಗಣದಲ್ಲಿ ನೆರವೇರಿತು.
ಹಿರಿಯ ಅಧ್ಯಾತ್ಮಿಕ ಚಿಂತಕ ಎಂ.ಎನ್‌. ತಳವಾರ ಇವರು ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ ವಚನ ಸಾಹಿತ್ಯವು ಜೀವನ ನಡೆಸುವ ಕ್ರಮ, ಅಸ್ಪೃಶ್ಯತೆಯನ್ನು ಹೋಗಲಾಡಿಸಿ, ಜಾತಿ ಸಮಾನತೆ, ಲಿಂಗ ಸಮಾನತೆಯನ್ನು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ 12 ನೇ ಶತಮಾನದಲ್ಲಿ ಆಗಿರುವ ವಚನಕ್ರಾಂತಿಯ ಪುನರುತ್ಥಾನ ಆಗಬೇಕಾಗಿದೆ ಎಂದರು.
ಕೆಕೆ ಹಳ್ಳಿ ನಿತ್ಯಾನಂದ ಮಠದ ಶ್ರೀ ಸುಬ್ರಮಣ್ಯ ಸ್ವಾಮಿ ಇವರ ಸಾನಿಧ್ಯದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ತಹಶೀಲ್ದಾರ ವಿದ್ಯಾದರ ಗುಳಗುಳಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಹೂಲಿ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಎಮ್‌.ಬಿ. ತೋರಣಗಟ್ಟಿ, ಹಿರಿಯ ನಾಗರಿಕ ಟ್ರಸ್ಟ್‌ ಅಧ್ಯಕ್ಷ ಡಿ.ಎಮ್‌. ಸಾವಂತ, ಶಿವದೇವ ದೇಸಾಯಿಸ್ವಾಮಿ, ಲಿಂಗರಾಜ ಹಿರೇಮಠ, ಶಾರಕ್ಕಾ ಕಿತ್ತೂರ, ಅಶೋಕ ಕಣಿಮೆಹಳ್ಳಿ, ವನಮಾಲಾ ಗೌಡರ ಉಪಸ್ಥಿತರಿದ್ದರು ಡಾ. ಸಿ.ಎಸ್‌. ಓಶೀಮಠ, ಎಚ್‌.ಸುಮಾ ಹಾಗೂ ಸೃಷ್ಟಿ ದೇಸಾಯಿಸ್ವಾಮಿ ವಚನ ಗಾಯನ ಹಾಡಿದರು. ಮಹಾಂತ ದೇಸಾಯಿಸ್ವಾಮಿ ನಿರೂಪಿಸಿದರು.

loading...