ವಿದ್ಯಾರ್ಥಿಗಳಿಂದ ಶಾಸಕರ ಮನೆ ಮುತ್ತಿಗೆ

0
33
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಸರ್ಕಾರ ವಿದ್ಯಾರ್ಥಿಗಳ ಮೇಲೆ ತಾರತಮ್ಯ ಮಾಡುತ್ತಾ ಬೆರಳಣಿಕೆಯಷ್ಟು ಜನರಿಗೆ ಲ್ಯಾಪಟ್ಯಾಪ ನೀಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ವೈಮನಸ್ಸು ಮೂಡಿಸಿದ್ದು, ಲ್ಯಾಪ್‌ ಟಾಪ್‌ ವಿತರಣೆ ಮಾಡಿದರೆ ಎಲ್ಲ ವಿದ್ಯಾರ್ಥಿಗಳಿಗೆ ನೀಡಬೇಕೆಂದು ನೂರಾರು ವಿದ್ಯಾರ್ಥಿಗಳು ಶಾಸಕರ ಮನೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ತಾಲೂಕಿನ ಶ್ರೀಮತಿ ಆಯ್‌.ಎಸ್‌. ಯಾದವಾಡ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪದವಿಧರ ನೂರಾರು ವಿದ್ಯಾರ್ಥಿಗಳು ಶಾಸಕರ ಮನೆಗೆ ಆಗಮಿಸಿ ಸರಕಾರವು ಎಲ್ಲ ಪದವಿಧರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಪೂರೈಸುವದಾಗಿ ಭರವಸೆ ನೀಡಿದ್ದರು. ಆದರೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಸರಕಾರದಿಂದ ಲ್ಯಾಪ್‌ಟಾಪ್‌ ಪೂರೈಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸರಕಾರವು ತಾರತಮ್ಯ ತೋರಿಸುತ್ತಿದ್ದು, ಇದು ಆಗದಂತೆ ದ್ವಿತೀಯ ಹಾಗೂ ತೃತೀಯ ಪದವಿಧರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಪೂರೈಸಬೇಕು ಎಂದು ಮನವಿ ಮಾಡಿಕೊಂಡರು.
ವಿದ್ಯಾರ್ಥಿಗಳು ಬಂದ ಸಮಯದಲ್ಲಿ ಶಾಸಕರು ಮನೆಯಲ್ಲಿ ಇಲ್ಲದ ಕಾರಣವಾಗಿ ಮನೆಯಲ್ಲಿದ್ದ ನ್ಯಾಯವಾದಿಗಳಾದ ಜಮುನಾ ಪಟ್ಟಣ ಮನವಿಯನ್ನು ಸ್ವೀಕರಿಸಿ ವಿದ್ಯಾರ್ಥಿಗಳ ಬೇಡಿಕೆಯನ್ನು ಶಾಸಕರಲ್ಲಿ ತಿಳಿಸಿ ಕಾಲೇಜಿಗೆ ಭೇಟಿ ನೀಡುವುದಾಗಿ ಎಂದು ಹೇಳಿದ ವಿದ್ಯಾರ್ಥಿಗಳಿಗೆ ಸಮಾಧಾನ ಪಡಿಸಿದರು.

loading...