ವಿದ್ಯುತ್‌ ತಂತಿ ತಗುಲಿ ಮೇವು ಸಾಗಿಸುತ್ತಿದ್ದ ಟ್ರಕ್‌ ಬಸ್ಮ

0
24
loading...

ಕನ್ನಡಮ್ಮ ಸುದ್ದಿ-ಸವದತ್ತಿ: ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಅಮೋಘ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಸೋಮವಾರರಂದು 12 ಗಂಟೆ ಸುಮಾರಿಗೆ ಮೇವು ಸಾಗಿಸುತ್ತಿದ್ದ ಟ್ರಕ್‌ಗೆ ವಿದ್ಯತ್‌ ತಂತಿ ತಗುಲಿ ಟ್ರಕ್‌ನಲ್ಲಿದ್ದ ಮೇವು ಹಾಗೂ ಟ್ರಕ್‌ ಸಂಪೂರ್ಣವಾಗಿ ಸುಟ್ಟುಹೋಗಿವೆ.
ಹಿರೇಕುಂಬಿಯಿಂದ ಕೌಜಲಗಿ ಗ್ರಾಮಕ್ಕೆ ಮೇವನ್ನು ಟ್ರಕ್‌ ಮೂಲಕ ಸಾಗಿಸುತ್ತಿದ್ದಾಗ ಈ ಘಟನೆ ಸಂಬವಿಸಿದೆ. ಟ್ರಕ್‌ ಕೌಜಲಗಿ ಗ್ರಾಮದ ಅಬ್ದುಲ್‌ ಅಹಮ್ಮದ ಮುಲ್ತಾನಿ ಎಂಬುವವರದಾಗಿದ್ದು ಬೆಂಕಿ ತಗುಲಿದ ಕೂಡಲೆ ಹಿರೇಕುಂಬಿ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಮುಂದಾಗಿ ಕೆಲಸ ಮಾಡಿದರು ನಂತರ ಸುದ್ದಿ ತಿಳಿದಾಕ್ಷಣ ಸವದತ್ತಿ ಅಗ್ನಿಶಾಮಕ ದಳದವರು ಆಗಮಿಸಿ ಅಗ್ನಿಯನ್ನು ಹತೋಟಿಗೆ ತಂದರು.
ಗ್ರಾಮದ ಮುಖಂಡರಾದ ಗಂಗಯ್ಯ ಅಮೋಘಿಮಠ ಮಾತನಾಡಿ ವಿದ್ಯುತ್‌ ತಂತಿಗಳು ಈ ಮೇವಿನ ಟ್ರಕ್‌ಗೆ ತಗುಲಿ ಅಗ್ನಿ ಅನಾಹುತ ಸಂಬವಿಸಿತು. ಈ ವಿದ್ಯುತ್‌ ತಂತಿಗಳು ಕೆಳಗಡೆ ಇವೇ ಈ ವಿಷಯವಾಗಿ ಗ್ರಾಮ ಪಂಚಾಯತಿಗೆ ನಾನು ದೂರನ್ನು ನೀಡಿದ್ದೆನೆ. ಅವರು ಇದುವರೆಗೂ ಸ್ಪಂದಿಸಿಲ್ಲ ಎಂದು ದೂರು ನೀಡಿದರು.

loading...