ವಿಮಾನ ಪತನ – ಉದ್ಯಮಿ ಪುತ್ರಿ ಸೇರಿದಂತೆ 11 ಮಂದಿ ಸಾವು

0
45
loading...

ಟೆಹರಾನ್: (ಹಿವಿವಾಹ ನಿಶ್ಚಯದ ಹಿನ್ನಲೆಯಲ್ಲಿ ಉದ್ಯಮಿಯೊಬ್ಬರ ಪುತ್ರಿ ತನ್ನ ಸ್ನೇಹಿತೆಯರಿಗೆ ಪಾರ್ಟಿ ನೀಡಿ ಅವರೊಂದಿಗೆ ವಾಪಸ್ಸಾಗುತ್ತಿದ್ದಾಗ ವಿಮಾನ ಪತನಗೊಂಡು ಯುವತಿ ಹಾಗು ಹಾಗು ಆಕೆಯ ಏಳು ಮಂದಿ ಸ್ನೇಹಿತೆಯರು ಸೇರಿದಂತೆ 11 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಇರಾನ್‌ನ ಶಹರ್-ಇ ಕಾರ್ಡ್ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.
ಉದ್ಯಮಿ ಹುಸೈನ್‌ ಬಸರ್ನ್‌ ಎಂಬುವರ ಮಗಳು ಮೀನಾ ಬಸರ್ನ್‌ ಮದುವೆ ಮುಂದಿನ ತಿಂಗಳು 14 ರಂದು ಉದ್ಯಮಿ ಮುರತ್‌ ಗೇಜರ್‌ ಜೊತೆ ಇಸ್ತಾಂಬುಲ್‌ನಲ್ಲಿ ವಿವಾಹ ನಿಶ್ಚಯವಾಗಿತ್ತು. ತಮ್ಮ ಮದುವೆ ನಿಶ್ಚಯ ಸಂಬಂಧ ಮೀನಾ ತಮ್ಮ ಗೆಳತಿಯರಿಗೆ ದುಬೈನಲ್ಲಿ ಪಾರ್ಟಿ ನೀಡಿದ್ದರು.
ಪಾರ್ಟಿಯ ಬಗ್ಗೆ ಮೀನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹರಿಬಿಟ್ಟಿದ್ದರು. ಇನ್ನು ಪಾರ್ಟಿ ಮುಗಿಸಿಕೊಂಡು ತಮ್ಮದೇ ವಿಮಾನ ಬಂಬಾರ್ಡಿಯರ್ ಸಿಎಲ್-604ನಲ್ಲಿ ಹಿಂದುರುಗುತ್ತಿದ್ದಾಗ ಮೀನಾ ಮತ್ತು ಆಕೆಯ ಸ್ನೇಹಿತೆಯರಿದ್ದ ವಿಮಾನ ಇರಾನ್‌ನ ಶಹರ್-ಇ ಕಾರ್ಡ್ ಗುಡ್ಡಗಾಡು ಪ್ರದೇಶದಲ್ಲಿ ಪತನವಾಗಿದೆ.
ಇನ್ನು ವಿಮಾನಕ್ಕೆ ಆಗಸದಲ್ಲೇ ಬೆಂಕಿ ಹೊತ್ತಿಕೊಂಡಿತ್ತು. ಭೂಮಿಗೆ ಅಪ್ಪಳಿಸುತ್ತಲೇ ವಿಮಾನ ಸ್ಫೋಟಗೊಂಡಿದು ಎಂದು ಸ್ಥಳೀಯರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. 

loading...