ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾರದಾ

0
13
loading...

ಕನ್ನಡಮ್ಮ ಸುದ್ದಿ-ಕುಮಟಾ: ನಗರೋತ್ಥಾನ ಮೂರನೇ ಹಂತದ 7.5 ಕೋಟಿ ರೂ ಗಳ 16 ವಿವಿಧ ಕಾಮಗಾರಿಗಳಿಗೆ ಶಾಸಕಿ ಹಾಗೂ ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ ಶೆಟ್ಟಿ ಚಾಲನೆ ನೀಡಿದರು.
ಅವರು ಬುಧವಾರ ಪಟ್ಟಣದ ಪಿಕ್‌ಅಪ್‌ ಬಸ್‌ ನಿಲ್ದಾಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣದ ಕಸ ವಿಲೇವರಿಗಾಗಿ ಹೊಸದಾಗಿ ಖರೀದಿಸಲಾದ ಕಾಂಪ್ಯಾಕ್ಟರ್‌ ವಾಹನಕ್ಕೆ ಚಾಲನೆ ನೀಡಲಾಗಿದೆ. ಈ ವಾಹನ ಕುಮಟಾದಲ್ಲೆ ಮೊಟ್ಟಮೊದಲಿಗೆ ಬಂದಿದೆ. ಅಲ್ಲದೇ ಒಳಚರಂಡಿ ಕಾಮಗಾರಿಯಿಂದ ಪಟ್ಟಣದ ರಸ್ತೆಗಳೆಲ್ಲ ಹದಗೆಟ್ಟಿರುವ ಆರೋಪವಿದೆ. ಹಾಗಾಗಿ ಹದಗೆಟ್ಟ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಿಸುತ್ತೇವೆ. ಅಲ್ಲದೆ ನಗರೋತ್ಥಾನದ 3ನೇ ಹಂತದ ಕಾಮಾಗಾರಿಗಳ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಮಧುಸೂಧನ ಶೇಟ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯಾ ವಾರ್ಡ್‌ನಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಮೋಹಿನಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಹರಿಕಂತ್ರ, ಸದಸ್ಯರಾದ ರಾಜೇಶ ಪ್ರಭು, ಯೋಗಾನಂದ ಗಾಂಧಿ, ಕಾಂತರಾಜ ನಾಯ್ಕ, ಲಿಂಗಪ್ಪ ನಾಯ್ಕ, ಮಂಜುನಾಥ ಜೈನ್‌, ವಿನಯಾ ಜಾರ್ಜ್‌, ಅನಿತಾ ಮಾಪಾರಿ, ಮಹೇಶ ನಾಯ್ಕ, ಗಣಪತಿ ಶೆಟ್ಟಿ, ನಾಗರಾಜ ನಾಯ್ಕ, ಖತಿಜಾ ಶೇರ್‌ ಅಲಿ, ವ್ಯವಸ್ಥಾಪಕ ನೀಲಕಾಂತ ಮೇಸ್ತ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ ಎಲ್‌ ನಾಯ್ಕ, ಎಂ ಟಿ ನಾಯ್ಕ, ನಿತ್ಯಾನಂದ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.

loading...