ವಿವಿಧ ಬೇಡಿಕೆಗಳಿಗೆ ಆಗ್ರಹ ಪ್ರತಿಭಟನೆ

0
43
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ:ಪಟ್ಟಣದ ಸಮಾನ ಮನಸ್ಕ ನೂರಾರು ಯುವಕರು ಸೇರಿ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಿರುದ್ಯೋಗ ಯುವಕರಿಗೆ ಪ್ರತೇಕ ಒಂದು ನಿಗಮ ತರೆದು ಅನುದಾನ ನೀಡಿ ಅವರಿಗೆ ಉದ್ಯೋಗ ನೀಡುವದಾಗಬೇಕು. 18 ರಿಂದ 45 ವರ್ಷದ ಯುವಕರಿಗೆ ಸರ್ಕಾರದ ಉಧ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು. ಅವರಿಗೆ ಸ್ವಂತ ಉಧ್ಯೋಗ ಕಲ್ಪಿಸಲು ಸಾಲ ವಿತರಿಸಬೇಕು. ಕೃಷಿಯಲ್ಲಿ ನಿರತರಾದ ಯುವಕರಿಗೆ ಮಾಸಾಶಾನ ನೀಡಬೇಕು. ಅವರ ಸಾಲ ಮನ್ನಾ ಮಾಡಲು ರಾಜ್ಯ ಮತ್ತು ಕೇಂದ್ರ ಸಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು. ಶ್ರೀಕಾಂತ ಶಿರಹಟ್ಟಿ, ದುಂಡೇಶ ಗರಗದ, ಅನೀಲ ಕರಬನ್ನವರ, ಶಂಕರ ಪರವಿನಾಯ್ಕರ, ಶಂಕರ ಬಾಗಲಕೋಟ್‌, ಅಶೋಕ ಮುರಗೋಡ,ಫಕಿರಪ್ಪ ಹೋಳಿ, ದೇವಿಂದ್ರ ಜಾಲಿಗುಡ್ಡ, ಎನ್‌.ಕೆ.ಮಲ್ಲಾರಿ ಸಂತೋಷ ಬಾಂವಿ ಮುಂತಾದವರು ಇದ್ದರು.

loading...