ವಿಶ್ವದ ಬಹುತೇಕ ರಾಷ್ಟ್ರಗಳು ಪೋಲಿಯೋ ಮುಕ್ತ ರಾಷ್ಟ್ರಗಳಾಗಿವೆ

0
23
loading...

ಕನ್ನಡಮ್ಮ ಸುದ್ದಿ- ಧಾರವಾಡ: ಭಾರತವು 2011 ರಲ್ಲಿಯೇ ಪೋಲಿಯೋ ಮುಕ್ತ ರಾಷ್ಟ್ರವಾಗಿ ಘೋಷಣೆಯಾಗಿದ್ದರೂ ಪಕ್ಕದ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಇತ್ತೀಚಿನವರೆಗೂ ಪೋಲಿಯೋ ರೋಗ ಕಾಣಿಸಿಕೊಂಡಿರುವದರಿಂದ ನಮ್ಮಲ್ಲಿ ಪೋಲಿಯೋ ಕುರಿತು ಉದಾಸೀನತೆ ಬೇಡ ಎಂದು ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ಹೇಳಿದರು. ಮಹಾನಗರ ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಜಿಲೆಯಲ್ಲಿ ಆರಂಭಗೊಂಡಿರುವ ಎರಡನೇ ಸುತ್ತಿನ ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾರ್ವಜನಿಕರನ್ನು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದರು.ಪೋಲಿಯೋ ಹಿಂದಿನ ದಿನಗಳಲ್ಲಿ ಒಂದು ಮಾರಕ ರೋಗವಾಗಿತ್ತು.

ಪಲ್ಸ್‌ ಪೋಲಿಯೋ ರಾಜ್ಯ ನೋಡೆಲ್‌ ಅಧಿಕಾರಿ ಡಾ.ಗೀತಾ ಬಾಲಿ, ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಸುಜಾತಾ ಹಸವಿಮಠ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಡಾ.ವಿ.ಡಿ.ಕರ್ಪೂರಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಶಿ ಪಾಟೀಲ ಉಪಸ್ಥಿತರಿದ್ದರು. ಡಾ.ಪುಷ್ಪಾ.ಎಚ್‌.ಆರ್‌. ಸ್ವಾಗತಿಸಿದರು. ಎಲ್‌.ಎಸ್‌.ಅಂಬಲಿ ನಿರೂಪಿಸಿದರು. ಡಾ. ಶೋಭಾ ಮೂಲಿಮನಿ ವಂದಿಸಿದರು.

loading...