ವೇತನಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ

0
25
loading...

ವೇತನಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಕನ್ನಡಮ್ಮ ಸುದ್ದಿ-ಬೆಳಗಾವಿ: ನೂತನವಾಗಿ ಮೇಲ್ದರ್ಜೇಗೆರಿದ ಪಟ್ಟಣ ಪಂಚಾಯತಿ ಹಾಗೂ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ ಮತ್ತು ಡಿ ಗ್ರೂಪ್‍ನ ಸಿಬ್ಬಂದಿಗಳ ವೇತನವನ್ನು ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಠ ಧರಣಿ ಸತ್ಯಾಗ್ರಹ ನಡೆಸಿದರು.
ಜಿಲ್ಲೆಯ 17 ಗ್ರಾಮ ಪಂಚಾಯತಿಯನ್ನು 2015-16ರಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಪಟ್ಟಣ ಪಂಚಾಯತ ಹಾಗೂ ಪುರಸಭೆಗಳಲ್ಲಿ ಗ್ರಾಪಂ ಠರಾವ ಮೂಲಕ ನೇಮಕಗೊಂಡು, ಜಿಪಂ.ಯಿಂದ ಅನುಮೋದನೆಯಾಗದೆ ಇರುವ ಜಿಲ್ಲೆಯ 270 ಸಿ ಮತ್ತು ಡಿ ಗ್ರೂಪ್‍ನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು. ಅವರಿಗೆ ಸುಮಾರು ತಿಂಗಳಿಂದ ವೇತನ ನೀಡದೆ ಇರುವ ಕಾರಣವಾಗಿ ಶನಿವಾರಂದು ಥರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗೆ ಮನವಿಯಲ್ಲಿ ಸಲ್ಲಿಸಿದರು.
ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆಯೇ ಕುಟುಂಬ ಅವಲಂಭಿತವಾಗಿದ್ದು, ಈಗ ಆರ್ಥಿಕವಾಗಿ ತೊಂದರೆ ಅನುಭವಿಸುವಂತಾಗಿದೆ. ಈಗಾಲೇ ಮುಖ್ಯಾಧಿಕಾರಿಗಳಿಗೆ ಹಾಗೂ ತಾಲೂಕಾ ತಹಶೀಲ್ದಾರ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಸ್ಪಂದಿಸಿಲ್ಲ. ಆದ್ದರಿಂದ ವೇತನವನ್ನು ನೀಡಿ ಕಾಯಂಗೊಳಿಸಬೇಕೆಂದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹೇಶ ಭಜಂತ್ರಿ,ಸುಭಾಷ ಗಜೆಬರ, ಕೇದಾರ ಬಾಕಳೇ, ಬಾಲು ಸಾನೀಕೊಪ್ಪ, ತಿಪ್ಪಣ್ಣಾ ಚುಣ್ಕಿ, ನಾಗರತ್ನ ಕೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...