ಶಾಸಕರ ವಿರುದ್ಧ ಆಪಾದನೆ ಸರಿಯಲ್ಲ: ನಾಯ್ಕ

0
20
loading...

ಕನ್ನಡಮ್ಮ ಸುದ್ದಿ-ಕುಮಟಾ: ಬಿಜೆಪಿಗರು ಮಾಡಿದ ಸ್ವಯಂಕೃತ ಅಪರಾಧಕ್ಕೆ ಶಾಸಕರನ್ನು ಹೊಣೆ ಮಾಡುವುದು ಮತ್ತು ಅವರ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡುವುದು ಸರಿಯಲ್ಲ. ಹಸುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಕರ್ಕಿಯಲ್ಲಿ ತಡೆದು ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಪ್ರಕರಣಕ್ಕೆ ಗುರಿಯಾಗಿದ್ದು, ಇದರಲ್ಲಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರ ಕುಮ್ಮಕ್ಕಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿರುವುದನ್ನು ಕುಮಟಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ ಎಲ್‌ ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ.
ಅವರು ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದನ್ನು ಸಹಿಸಲಾಗದ ಕೆಲ ಬಿಜೆಪಿಗರು ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕರ್ಕಿಯಲ್ಲಿ ಅಕ್ರಮವಾಗಿ ಹಸುಗಳ ಸಾಗಾಟದ ಪ್ರಕರಣ ಶಾಸಕರಿಗೆ ಗೊತ್ತೇ ಇಲ್ಲ. ಘಟನೆ ನಡೆದ ಮರುದಿನ ಪತ್ರಿಕೆಗಳಲ್ಲಿ ಸುದ್ದಿ ನೋಡಿದ ಮೇಲೆ ಗೊತ್ತಾಗಿದೆ. ಈ ಪ್ರಕರಣದಲ್ಲಿ ಪೋಲಿಸರು ಸ್ವತಂತ್ರವಾಗಿ ಕಾನೂನಿನ ಪ್ರಕಾರ ಕ್ರಮ ಜರುಗಿಸಿದ್ದಾರೆ. ಶಾಸಕರಿಗೆ ಈ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ತಾಲೂಕಾ ಮಹಿಳಾ ಘಟಕಾಧ್ಯಕ್ಷೆ ಸುರೇಖಾ ವಾರಿಕರ್‌, ಪುರಸಭೆ ಸದಸ್ಯರಾದ ಅನಿತಾ ಮಾಪಾರಿ, ವಿನಯಾ ಜಾರ್ಜ್‌, ಗಣಪತಿ ಶೆಟ್ಟಿ, ಅಳಕೋಡ ಗ್ರಾ ಪಂ ಅಧ್ಯಕ್ಷ ಕೃಷ್ಣಾನಂದ ವೆರ್ಣೆಕರ್‌, ಹೊಲನಗದ್ದೆ ಗ್ರಾ ಪಂ ಅಧ್ಯಕ್ಷ ರಾಘವೇಂದ್ರ ಪಟಗಾರ, ಪ್ರಮುಖರಾದ ಎಂ ಟಿ ನಾಯ್ಕ, ಸಚಿನ್‌ ನಾಯ್ಕ, ಕೆರೋಲಿನ್‌ ಫರ್ನಾಂಡಿಸ್‌, ನಾಗರಾಜ ನಾಯ್ಕ, ಮಂಜುನಾಥ ಗೌಡ, ರವಿ ಗೌಡ, ಅಮರನಾಥ ಶೆಟ್ಟಿ ಹಾಗೂ ತಾಲೂಕಿನ ವಿವಿಧ ಗ್ರಾ ಪಂ ಗಳ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.

loading...