ಶಾಸಕ ಸತೀಶ ಜಾರಕಿಹೊಳಿ ಅವರಿಂದ ರಾಜೀವ ಗಾಂಧಿ ಸೇವಾ ಕೇಂದ್ರದ ಶಂಕು ಸ್ಥಾಪನೆ .

0
72
loading...

ಶಾಸಕ ಸತೀಶ ಜಾರಕಿಹೊಳಿ ಅವರಿಂದ ರಾಜೀವ ಗಾಂಧಿ ಸೇವಾ ಕೇಂದ್ರದ ಶಂಕು ಸ್ಥಾಪನೆ .

 

ಕನ್ನಡಮ್ಮ ಸುದ್ದಿ 

 

ಸಂಕೇಶ್ವರ 13:ಸಮೀಪದ ಗೋಟುರ ಗ್ರಾಮದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನ ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಇಂದು ನೇರವೇರಿಸಿದರು .

 

ಮಂಗಳವಾರ ಗೋಟುರ ಗ್ರಾಮಕ್ಕೆ ಆಗಮಿಸಿದ ಶಾಸಕ ಸತೀಶ ಜಾರಕಿಹೊಳಿ ಗ್ರಾಮದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿ ಸದಸ್ಯರಿಗೆ ಸೂಚಿಸಿದರು .ಇದೆ ಸಂಧರ್ಭದಲ್ಲಿ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಜಾಗ ಮಂಜೂರು ಮಾಡಿಸುವಂತೆ ಶಾಸಕರಿಗೆ ಗ್ರಾಮದ ಯುವಕರು ಮನವಿ ಸಲ್ಲಿಸಿದರು .ಗ್ರಾಮ ಪಂಚಾಯತಿ ವತಿಯಿಂದ ಶಾಸಕರಿಗೆ ಸತ್ಕರಿಸಲಾಯಿತು .

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಶ್ರೀಮತಿ ದೀಪಾ ಮಾಶೇವಾಡಿ,ಉಪಾದ್ಯಕ್ಷರಾದ ಹನುಮಂತ ಶೇಖನವರ,ಶಾಲಾ ಸುಧಾರಣೆ ಸಮೀತಿ ಅಧ್ಯಕ್ಷರಾದ ನಾನಾಸಾಹೇಬ ಶೇಖನವರ, ತಾ.ಪಂ.ಸದಸ್ಯರಾದ ನಿಂಗನಗೌಡ ಪಾಟೀಲ,ಮುಖಂಡರಾದ ರವಿಂದ್ರ ಮಾಶೇವಾಡಿ,ನಿಜಪ್ಪಾ ಕಮತೆ,ಭೀಮಗೌಡ ಪಾಟೀಲ, ಗುರುನಾಥ ಶಿಂಧೆ,ತಾತ್ಯಾಗೌಡ ಪಾಟೀಲ,ಸಚೀನ ಮನ್ನಿಕೇರಿ,ಕಲಗೌಡ ಕಮತೆ,ನಂದಾ ಮನ್ನಿಕೇರಿ,ವಿನಯ ಕೋಳಿ,ಬಸು ಕೋಳಿ,ರಾಜು ಶೇಖನ್ನವರ‌, ಪಿಡಿಓ ಲಕ್ಷ್ಮಿ ನಾರಾಯಣ ಹಾಗೂ  ಗ್ರಾಮಸ್ಥರು ಉಪಸ್ಥಿತರಿದ್ದರು .

loading...