ಸಂಗಳ ಗ್ರಾಪಂ ಶೌಚಾಲಯ ಕಾಮಗಾರಿಯಲ್ಲಿ ಅವ್ಯವಹಾರ

0
21
loading...

ಕನ್ನಡಮ್ಮ ಸುದ್ದಿ-ಸುರೇಬಾನ: ಸಮೀಪದ ಸಂಗಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಶೌಚಾಲಯ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು ಅದರ ಬಗ್ಗೆ ಗ್ರಾಮ ಪಂಚಾಯತಿಗೆ ಸಾಕಷ್ಟು ಬಾರಿ ಮೌಖಿಕವಾಗಿ ಹೇಳಿದರು ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಹಾಗೇ ಕಾಮಗಾರಿಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪೂರೈಸುತ್ತೇನೆ ಎಂದು ತಿಪ್ಪಣ್ಣ ಮಹಾದೇವಪ್ಪ ತಳವಾರ ತಿಳಿಸಿದ್ದಾರೆ. ಹೇಳಿದರು.
ಸಮೀಪದ ಸಂಗಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಶೌಚಾಲಯ ಕಾಮಗಾರಿಯಲ್ಲಿ ನಡೆದ ಅವ್ಯವಹಾರ ಕಂಡು ಬಂದಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಂಚಾಯತಿಯಿಂದ ತೆಗೆದುಕೊಂಡಿರುತ್ತೇನೆ ಮತ್ತು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸದೆ, ನಿರ್ಮಿಸಿದ ಬಗ್ಗೆ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಅದರ ಕಾಮಗಾರಿಯ ಬಿಲ್ಲನ್ನು ಸಹ ಬಿಡುಗಡೆ ಮಾಡಿರುತ್ತಾರೆ. ಇದರಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕೈವಾಡವಿರುವುದು ನಾವು ಇದರ ಬಗ್ಗೆ ಸರಕಾರಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ಮಾನ್ಯ ಸಚಿವರಿಗೂ ಅರ್ಜಿ ಸಲ್ಲಿಸಿರುತ್ತೇವೆೆ. ಅದರ ಬಗ್ಗೆ ಸಂಬಂಧಪಟ್ಟ ಅಧಿüಕಾರಿಗಳು ತನಿಖೆ ನಡೆಸಿ ಸರಕಾರದಿಂದ ಆಗುತ್ತಿರುವ ಹಣದ ದುರ್ಬಳಕೆಯನ್ನು ತಪ್ಪಿಸಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ.
ಜಿಲ್ಲಾ ಸಂಯೋಜನಕರು, ಸಾಮಾಜಿಕ ಪರಿಶೋಧನೆ, ಜಿಲ್ಲಾ ಪಂಚಾಯತ ಬೆಳಗಾವಿ ಅಧಿಕಾರಿಗಳು ಫೆ.27 ರಂದು ಶೌಚಾಲಯ ಕಾಮಗಾರಿಗಳ ಅವ್ಯವಹಾರ ಆಗಿದ್ದರಿಂದ ರಾಮದುರ್ಗ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಇಲ್ಲಿಯವರೆಗೂ ಕಾಮಗಾರಿಗಳ ಕುರಿತು ಪರಿಶೀಲನೆಗಾಗಿ ನಡೆಸಿಲ್ಲ. ಆದ್ದರಿಂದ ಕಾಮಗಾರಿ ಪರಿಶೀಲನೆ ನಡೆಸಿ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

loading...