ಸಂಗೀತಕ್ಕೆ ಮನಸ್ಸನ್ನು ಉಲ್ಲಾಸಮಯವಾಗಿಸುವ ಶಕ್ತಿಯಿದೆ: ಭವ್ಯಾ

0
12
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಸಂಗೀತಕ್ಕೆ ಮನಸ್ಸನ್ನು ಉಲ್ಲಾಸಮಯವಾಗಿಸುವ ಶಕ್ತಿಯಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು.
ಅವರು ಮಂಗಳವಾರ ರಾತ್ರಿ ಪಟ್ಟಣದ ಅಡಕೆ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯಲ್ಲಾಪುರದ ರಂಗ ಸಹ್ಯಾದ್ರಿ ಹಾಗೂ ಜೊಯ್ಡಾದ ಸುಪಾ ಚಾರಿಟೇಬಲ್ ಫೌಂಡೇಶನ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಾಹಬ್ಬ-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸಿದ್ಧ ಗಾಯಕ ಅನನ್ಯ ಭಾರ್ಗವ ಮಾತನಾಡಿ, ಜಾಲತಾಣಗಳಲ್ಲಿ ಕಳೆದು ಹೋಗುತ್ತಿರುವ ಯುವ ಜನತೆ ಸಂಗೀತದಂತಹ ಕಲೆಯತ್ತ ನಿರಾಸಕ್ತಿ ತಳೆಯುತ್ತಿದ್ದಾರೆ. ಕನ್ನಡ ಭಾಷೆ ಸತ್ವಯುತವಾಗಿ ಉಳಿದಿರುವುದು ಸಂಗೀತ, ಯಕ್ಷಗಾನದಂತಹ ಕಲೆಗಳಲ್ಲಿ ಮಾತ್ರ ಎಂದರು.
ಅಡಕೆ ವರ್ತಕರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ರಂಗ ಸಹ್ಯಾದ್ರಿ ಅಧ್ಯಕ್ಷ ಡಿ. ಎನ್. ಗಾಂವ್ಕಾರ, ಸುಪಾ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಗಿರೀಶ ಭಾಗ್ವತ ಉಪಸ್ಥಿತರಿದ್ದರು. ಸುಪರ್ಣಾ ದೇಸಾಯಿ ನಿರೂಪಿಸಿದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅನನ್ಯ ಭಾರ್ಗವ ಬೆಂಗಳೂರು, ಆರಾಧನಾ ಹೆಗಡೆ ಕಲ್ಗುಂಡಿಕೊಪ್ಪ ಅವರ ಗಾಯನ ರಂಜಿಸಿತು. ಗಣೇಶ ಗುಂಡ್ಕಲ್ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ ಅವರ ಹಾರ್ಮೋನಿಯಂ ಸಾಥ್ ನೀಡಿದರು.

loading...