ಸಂಘಟನೆ ಮಾಡಿ ಆದರೆ ಸಂಘರ್ಷ ಮಾಡಬೇಡಿ: ಶಾಸಕ ಪಾಟೀಲ

0
15
loading...

ಕನ್ನಡಮ್ಮ ಸುದ್ದಿ-ಬಸವನಬಾಗೇವಾಡಿ: ಸುಂದರ ಸಮಾಜ ನಿರ್ಮಿಸಲು ಸಂಘಟನೆ ಅವಶ್ಯಕವಾಗಿದ್ದು ಸಂಘಟನೆ ಮಾಡಬೇಕು ಆದರೆ ಸಂಘಟನೆಯಿಂದ ಸಂಘರ್ಷವುಂಟಾಗಬಾರದು ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.
ಸ್ಥಳೀಯ ಬಸವಜನ್ಮ ಸ್ಮಾರಕದ ಮಾದರಸ ಸಭಾಭವನದಲ್ಲಿ ಭಾನುವಾರ ನಡೆದ ಕನಾಟಕ ಬಂಜಾರಾ ರಕ್ಷಣಾ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು ಸಂಘಟನೆಯಿಂದ ಅನೇಕ ಸಂಘರ್ಷಗಳು ಆಗಿವೆ ಸಮಾಜದಲ್ಲಿ ಅನೇಕ ಸಂಘಟನೆಗಳು ಹುಟ್ಟಿವೆ ಆ ಸಂಘಟನೆಗಳಗಿಂತಲೂ ಮುಂದುವರಿದ ಸಂಘಟನೆ ಆಗಬೇಕು, ಸತ್ಯ ನಿಷ್ಠೆವುಳ್ಳ ಮಾದರಿ ಸಂಘಟನೆಯಾಗಬೇಕು ಸ್ಪರ್ಧಾತ್ಮಕವಾದ ಸಂಘಟನೆಯಾಗಬೇಕೆಂದು ಹೇಳಿದರು.
ಬಂಜಾರಾ ಸಮಾಜದವರು ಊರ ಹೊರಗೆ ಇದ್ದು ಊರನ್ನು ಕಟ್ಟಿದ ಸಮಾಜ, ಸುಶಿಕ್ಷಿತ, ಪ್ರಮಾಣಿಕತೆಯಿಂದ ಇರುವ ಸಮಾಜ, ಯಾವುದೇ ಕೋರ್ಟ ಕಚೇರಿಗಳಿಗೆ ಹೋಗದೆ ತಮ್ಮ ವ್ಯಾಜ್ಯವನ್ನು ತಮ್ಮಲ್ಲಿ ಬಗೆಹರಿಸಿಕೊಳ್ಳುವುದರೊಂದಿಗೆ ದೈವಿಭಕ್ತಿ, ನಿಸರ್ಗವನ್ನು ಪೂಜಿಸುವ ಸಮಾಜ ಇದಾಗಿದೆ, ಸರಕಾರ ತಪ್ಪು ಮಾಡಿದಲ್ಲಿ ತಿಳಿವಳಿಕೆ ಹೇಳುವ ಶಕ್ತಿ ಸಂಘಟನೆಗೆ ಇದೆ ಸರಕಾರದ ಯಾವುದೇ ಕೆಲಸವಾಗಬೇಕಾದರೆ ಸಂಘಟನೆಯ ಪಾಲುದಾರಕೆ ಇರಬೇಕು ಎಂದು ಹೇಳಿದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ಮಾತನಾಡಿ ಸಂಘಟನೆಯಿಂದ ಸಮಾಜ ರಕ್ಷಣೆಯಾಗಬೇಕು, ಸಮಾಜದಲ್ಲಿರುವ ಲೋಪದೋಷಗಳನ್ನು ತೊಡೆದುಹಾಕಿ ಈ ರಾಜ್ಯ ದೇಶದ ರಕ್ಷಣೆಗಾಗಿ ಕಂಕಣಬದ್ಧರಾಗಬೇಕು, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಶ್ರಮಿಸುವ ಸಂಘಟನೆಯಾಗಬೇಕು ಎಂದು ಹೇಳಿದರು.
ತಾಲೂಕಿನ ಮಸಬಿನಾಳ ಗ್ರಾಮದ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು, ವಿಜಯಪುರದ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ರಾಜು ಪವಾರ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಹರಿಲಾಲ ನಾಯಕ, ಅಣ್ಣಾಜಿ ರಾಠೋಡ, ಬಂಜಾರಾ ಸಮಾಜದ ಅಧ್ಯಕ್ಷ ಕಾಶೀನಾಥ ರಾಠೋಡ, ಡಾ. ಬಸವರಾಜ ಚವ್ಹಾಣ, ಕಾಂಗ್ರೆಸ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಮಂಜುಳಾ ರಾಠೋಡ ಉಪಸ್ಥಿತರಿದ್ದರು. ಸಂತೋಷ ಲಮಾಣಿ ಸ್ವಾಗತಿಸಿದರು, ಎಚ್‌.ಬಿ.ಬಾರಿಕಾಯಿ ನಿರೂಪಿಸಿದರು. ನ್ಯಾಯವಾದಿ ರವಿ ರಾಠೋಡ ವಂದಿಸಿದರು. ಇದೇ ಲಂಬಾಣಿ ವೇಷಧಾರಿ ವಿದ್ಯಾರ್ಥಿನಿಯರಿಂದ ಲಂಬಾಣಿ ನೃತ್ಯ ನಡೆಯಿತು.

loading...