ಸಂಭಾಜಿ ಬೀಡೆ ಪರವಾಗಿ ಶಿವ ಪ್ರತಿಷ್ಠಾನ ಪ್ರತಿಭಟನೆ

0
31
ಕನ್ನಡಮ್ಮ ಸುದ್ದಿ-ಬೆಳಗಾವಿ : ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಸಂಭಾಜಿ ಬೀಡೆ ಮೇಲೆ ದುಷ್ಟಶಕ್ತಿಗಳು ಸುಳ್ಳು  ಆರೋಪಗಳನ್ನು ಮಾಡುತ್ತಿರುವನ್ನು ಖಂಡಿಸಿ ಬುಧವಾರ ಶಿವ ಪ್ರತಿಷ್ಠಾನದ ನೇತೃತ್ವದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.
ನಗರದ ಸಂಭಾಜಿ ವೃತ್ತದಿಂದ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕಾಲೇಜು ರಸ್ತೆ, ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮೆರವಣಿಗೆಯುದ್ದಕ್ಕೂ ಸಂಭಾಜಿ ಬೀಡೆ, ಶಿವಾಜಿ ಮಹಾರಾಜರ ಪರ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಸಂಭಾಜಿ ಬೀಡೆ ವಿರುದ್ಧ ಪ್ರಕಾಶ ಅಂಬೇಡ್ಕರ್ ಮಾಡಿರುವ ಆರೋಪಗಳನ್ನು ಪ್ರತಿಭಟನಾಕಾರರು ಖಂಡಿಸಿದರು. ಭೀಮಾ ಕೋರಾಗಾಂವದಲ್ಲಿ ನಡೆದ ಗಲಭೆಯ ಕುರಿತು ತನಿಖೆ ನಡೆಸಿ ಸಂಭಾಜಿ ಬೀಡೆ ಅವರನ್ನು ಖುಲಾಸೆಗೊಳಿಸಿದೆ. ಸಂಭಾಜಿ ಬೀಡೆ ಕರ್ನಾಟಕ ಪ್ರವೇಶ ನಿಷೇಧಿಸುತ್ತಿರುವುದನ್ನು ಸರಕಾರ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಶಿವ ಪ್ರತಿಷ್ಠಾನದ ಸದಸ್ಯರು, ನೂರಾರು ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
loading...