ಸಂವಹನ ಕಲೆ ಮಹತ್ವದ್ದು: ಡಾ.ಮೂಲಿಮನಿ

0
23
loading...

ಕಾರವಾರ: ಇಂದಿನ ಆಧುನಿಕ ಯುಗದಲ್ಲಿ ಸಂವಹನ ಕೌಶಲ್ಯ ಅತ್ಯಾವಶ್ಯಕವಾಗಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಬೇಕು ಎಂದು ಡಾ.ಅರವಿಂದ್ ಮೂಲಿಮನಿ ಹೇಳಿದರು.

ಅವರು ನಗರದ ಬಾಡ್‍ನ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಉದ್ಯೋಗ ಮಾಹಿತಿ ಮತ್ತು ಬ್ಯೂರೋ ಹಾಗೂ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನದ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.
ಬಳಿಕ ವಿದ್ಯಾರ್ಥಿಗಳಿಗೆ ಸಂವಹನದ ಕೌಶಲ್ಯ ಹಾಗೂ ಭವಿಷ್ಯದಲ್ಲಿ ಸಂದರ್ಶನ ಎದುರಿಸುವ ಬಗೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ವಡಪ್ಪಿ ರವರು ವ್ಯಕ್ತಿತ್ವ ವಿಕಸನ ಹಾಗೂ ಧನಾತ್ಮಕ ಮಾನಸಿಕ ವರ್ತನೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಶಿವಾಜಿ ಕಲಾ ಮತ್ತು ವಾಣಿಜ್ಯ ಹಾಗೂ ಬಿ.ಸಿ.ಎ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೋ. ಎ.ಜಿ. ಕೆರ್ಲೇಕರ್ ಅವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಿತ ವಚನ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿವಾನಂದ.ವಿ.ನಾಯಕ ವಹಿಸಿದ್ದರು. ಡಾ.ಸುಮನ ಸಾವಂತ್ ಸ್ವಾಗತಿಸಿದರು. ಸಂಪ್ರದಾ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಡಾ. ಮಾಧವಿ.ಗಾಂವಕರ ವಂದಿಸಿದರು. ಡಾ. ನವೀನ್ ದೇವರಭಾವಿ ಕಾರ್ಯಕ್ರಮ ನಿರೂಪಿಸಿದರು.

loading...