ಸಬಲ ಮಹಿಳೆ ಇಂದು ಸಮಾಜದ ಕಣ್ಣಾಗಿದ್ದಾಳೆ: ಡಾ.ಮೈತ್ರೇಯಿಣಿ

0
27
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಆಧುನಿಕ ಮಹಿಳೆ ಸಬಲೀಕರಣಗೊಂಡಿದ್ದಾಳೆ.ಎಲ್ಲ ರಂಗಗಳಲ್ಲಿಯೂ ಸಾಧಕಳಾಗಿದ್ದಾಳೆ. ಸಬಲ ಮಹಿಳೆ ಇಂದು ಸಮಾಜದ ಕಣ್ಣಾಗಿದ್ದಾಳೆ. ನಮ್ಮ ನಾಡನ್ನು ಪ್ರತಿನಿಧಿಸುವ ಬೆಳಗಾವಿಯ ಹೆಮ್ಮೆಯ ಬೆಳವಡಿ ಮಲ್ಲಮ್ಮ ಮತ್ತು ಕಿತ್ತೂರ ರಾಣಿ ಚನ್ನಮ್ಮಾಜಿಯವರ ಬದುಕು ನಮಗೆ ಅನುಕರಣೀಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೊ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ಸ್ಥಳೀಯ ಶಿವಬಸÀವ ನಗರದಲ್ಲಿ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಸೋಮವಾರರಂದು ಅಪೂರ್ವ, ವಿನೂತನ ಮಹಿಳಾ ದಿನಾಚರಣೆ ಹಾಗೂ ರಾಣಿ ಮಹಾರಾಣಿ ಸ್ಪರ್ಧೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಪ್ರಜ್ಞೆ ಸಾಮಾಜಿಕ ಪ್ರಜ್ಞೆವುಳ್ಳ ಬೆಳವಡಿ ಮಲ್ಲಮ್ಮಾಜಿ ವಿಶ್ವದಲ್ಲಿ ಪ್ರಪ್ರಥಮವಾಗಿ 2000 ಸಾವಿರ ಮಹಿಳಾ ಸೈನ್ಯ ಕಟ್ಟಿದ ಹೆಮ್ಮೆ ಇದೆ ಎಂದರು.
ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೇ ಭಾರತಿ ಸಂಕಣ್ಣನವರ ಮಾತನಾಡಿ ಎಲ್ಲಿ ಮಹಿಳೆಗೆ ಮರ್ಯಾದೆ ಇರುತ್ತದೆ ಅಲ್ಲಿ ಧನಾತ್ಮಾಕ ಚಿಂತನೆ ನೆಲೆಸಿರುತ್ತದೆ.ಸೃಷ್ಠಿಯ ಅದ್ಭುತ ಶಕ್ತಿಯನ್ನು ಹೊಂದಿರುವ ಜೀವದಾತೆ-ಮಹಿಳೆ ಮಗಳಾಗಿ,ಪತ್ನಿಯಾಗಿ,ಸೊಸೆಯಾಗಿ,ಅತ್ತೆಯಾಗಿ,ತಾಯಿಯಾಗಿ ಅವಳು ನಿರ್ವಹಿಸುವ ಪಾತ್ರ ಅನನ್ಯ,ಸ್ವಸ್ತ್ಯ ಸಮಾಜ ಕಲ್ಪನೆಗೆ ಮಹಿಳೆ ಆಧಾರ ಎಲ್ಲ ಜೀವಪರ ಧ್ವನಿಗೂ-ದನಿಯಾಗಿ ನಿಲ್ಲಬಲ್ಲವಳು ಹೆಣ್ಣು ಎಂದರು.
ಈ ಕಾರ್ಯಕ್ರಮದಲ್ಲಿ ರಾಣಿ ಮಹಾರಾಣಿ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನ ಮಾಧುರಿ ಉಪ್ಪಿನ,ತನಿಕಾ ಉಪ್ಪಿನ. ಎರಡನೆಯ ಬಹುಮಾನ ನೈನಾ ಗಿರಿಗೌಡರ,ಭೂಮಿ ರಿಗಿಗೌಡರ,ಮೂರನೇಯ ಬಹುಮಾನ ಸುಮಿತ್ರಾ ಕುಲಕರ್ಣಿ,ಸವಿತಾ ಕುಲಕರ್ಣಿ,ಬೇಸ್ಟ್ ಸ್ಟೇಜ್ ವಾಕ್ ಅನು ಮೆಳವಂಕಿ,ವಾಣಿ ಮೆಳವಂಕಿ.ಬೇಸ್ಟ್ ಪ್ರೋಪ್ರಾಮೇನ್ಸ್ ಸರೋಜಾ ನಿಶಾನದಾರ.ಮಗಳಿಗೊಂದು ಪತ್ರ ರಾಜೇಶ್ವರಿ ಹಿರೇಮಠ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಅಥಿತಿಯಾದ ವಿದ್ಯಾ ಹುಂಡೇಕರ ಅವರನ್ನು ಲಿಂಗಾಯತ ಮಹಿಳಾ ಸಮಾಜದ ಪರವಾಗಿ ಸನ್ಮಾನಿಸಲಾಯಿತು. ರಾಣಿ ಮಹಾರಾಣಿ ಬಹುಮಾನ ಪ್ರಾಯೋಜಕರಾದ ಸುವರ್ಣಾ ಅಬ್ಬಿಗೇರ.ಶೀಲ್ಪಾ ಪಾಟೀಲ,ನಮ್ರತಾ ಲಾಡ,ಶಕುಂತಲಾ ಮೂಲಿಮನಿ,ಮೃಣಾಲಿನಿ ಅಂಗಡಿ,ಶೈಲಜಾ ಭಿಂಗೆ,ಆಶಾ ಪಾಟೀಲ,ಶೀಲೂ ದೇಸಾಯಿ,ಶೈಲಾ ಸಂಸುದ್ದಿ,ಚರಾಟೆ ಹಾಗೂ ಉಪಸ್ಥಿತರಿದ್ದರು.ಪ್ರಭಾ ಪಾಟೀಲ ನಿರೂಪಿಸಿದರು. ಶ್ವೇತಾ ಪಾಟೀಲ ವಂದಿಸಿದರು.

loading...