ಸಮರ್ಪಕ ಮರಳು ಪೂರೈಸಲು ಬಿಜೆಪಿ ಆಗ್ರಹ

0
19
loading...

ಕನ್ನಡಮ್ಮ ಸುದ್ದಿ-ಖಾನಾಪುರ: ತಾಲೂಕಿನಾದ್ಯಂತ ನಡೆಯುತ್ತಿರುವ ವಿವಿಧ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸಮರ್ಪಕ ಮರಳು ಪೂರೈಸುವಂತೆ ಆಗ್ರಹಿಸಿದ ತಾಲೂಕಿನ ಬಿಜೆಪಿ ಮುಖಂಡರು ಪಟ್ಟಣದ ತಹಸೀಲ್ದಾರ್‌ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಬ್ಲಾಕ್‌ ಅಧ್ಯಕ್ಷ ವಿಠ್ಠಲ ಪಾಟೀಲ, ತಾಲೂಕಿನ ಜುಂಜವಾಡ, ನಂಜಿನಕೊಡಲ್‌ ಗ್ರಾಮಗಳಲ್ಲಿ ಮುಂದಿನ ತಿಂಗಳು ಲಕ್ಷ್ಮೀದೇವಿ ಜಾತ್ರೆ ನಡೆಯುವ ಕಾರಣ ಎರಡೂ ಗ್ರಾಮಗಳ ಗ್ರಾಮಸ್ಥರು ಮನೆ ದುರಸ್ತಿ, ರಿನೋವೆಶನ್‌ ಮತ್ತು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಉಳಿದೆಡೆ ಸರ್ಕಾರದಿಂದ ಮಂಜೂರಾದ ಆಶ್ರಯ ಮನೆಗಳನ್ನು ಕಟ್ಟಿಕೊಳ್ಳಲು ಫಲಾನುಭವಿಗಳು ಸಿಮೆಂಟ್‌, ಇಟ್ಟಿಗೆ, ಕಬ್ಬಿಣ ಮತ್ತಿತರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಆದರೆ ತಾಲೂಕಿನಲ್ಲಿ ಮರಳು ಸಂಗ್ರಹ ಮತ್ತು ಮಾರಾಟಕ್ಕೆ ಅಧಿಕಾರಿಗಳು ಸಂಪೂರ್ಣ ಕಡಿವಾಣ ಹಾಕಿರುವ ಕಾರಣ ಬಡ ಮತ್ತು ಸಾಮಾನ್ಯ ವರ್ಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪರಿಣಾಮ ಸರ್ಕಾರದಿಂದ ಮಂಜೂರಾದ ಶೌಚಾಲಯಗಳ ನಿರ್ಮಾಣಕ್ಕೂ ಮರಳು ಸಿಗದ ಸನ್ನಿವೇಶ ಎದುರಾಗಿದೆ. ಕೂಡಲೇ ತಾಲೂಕಿನ ಜನರಿಗೆ ಸುಲಭವಾಗಿ ಮರಳು ಸಿಗುವಂತೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಜಯ ಕುಬಲ, ಅಪ್ಪಯ್ಯ ಕೋಡೊಳಿ, ಅಶೋಕ ಚಲವಾದಿ, ಸುಭಾಸ ಚಲವಾದಿ, ಶಿವಶಂಕರ ಮಡ್ಡಿಮನಿ, ಮಲ್ಲಪ್ಪ ಮಾರಿಹಾಳ, ಪ್ರಮೋದ ಕೊಚೇರಿ, ಬಾಬುರಾವ ದೇಸಾಯಿ, ಮಾರುತಿ ಟಕ್ಕೇಕರ, ಜಿತೇಂದ್ರ ಮಾದಾರ, ಧನಶ್ರೀ ದೇಸಾಯಿ, ಸದಾನಂದ ಪಾಟೀಲ, ಕಿರಣ ಯಳ್ಳೂರಕರ, ಸುರೇಶ ದೇಸಾಯಿ, ರಾಜು ಪೂಜಾರಿ ಮತ್ತಿತರರು ಇದ್ದರು.

loading...