ಸಮಾಜದಲ್ಲಿ ಯಾವ ಕೆಲಸವೂ ಶ್ರೇಷ್ಟ-ಕನಿಷ್ಟ ಎಂಬುದಿಲ್ಲ: ಮುಕ್ತಾ

0
29
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಸಮಾಜದಲ್ಲಿಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಾ ಗುರುತಿಸಲ್ಪಡುತ್ತಿದ್ದಾರೆ. ಅನೇಕರು ಪ್ರತಿಭೆ ಹೊಂದಿದ್ದರೂ ಎಲೆಮರೆ ಕಾಯಿಯಂತೆ ಇರುತ್ತಾರೆ ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸಿದ್ದಪಡಿಸುವ ಮುಖ್ಯಸ್ಥೆ ನಾಗರತ್ನಾ ಭಟ್ಟ ಮಾದರಿಯಾಗಿದ್ದಾರೆ ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾಶಂಕರ ಹೇಳಿದರು.
ಅವರು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮಹಿಳಾ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸನ್ಮಾನದ ಪರಂಪರೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ಸಮಾಜದಲ್ಲಿ ಯಾವ ಕೆಲಸವೂ ಶ್ರೇಷ್ಟ-ಕನಿಷ್ಟ ಎಂಬುದಿಲ್ಲ. ನಾವು ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣುವ ಪ್ರವೃತ್ತಿ ಹೆಚ್ಚಿಸಿಕೊಳ್ಳಬೇಕು. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ನಾಗರತ್ನಾ ಭಟ್ಟ ಮಾತನಾಡಿ, ನಾಲ್ಕು ಗೋಡೆಯ ನಡುವೆ ಅಡುಗೆ ಮಾಡುತ್ತಿದ್ದ ನಾನು, ಇಂದು ಧೈರ್ಯವಾಗಿ ಈ ಎಲ್ಲ ಮಕ್ಕಳಿಗೆ ಊಟದ ಜವಬ್ದಾರಿ ನಿರ್ವಹಿಸುವಲ್ಲಿ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದ್ದೇನೆ. ಅಲ್ಲದೇ ನನ್ನ ಜೊತೆ ಕಾರ್ಯನಿರ್ವಹಿಸಿದ ಉಳಿದ ಸಹೋದ್ಯೋಗಿಗಳ ಸಹಕಾರವನ್ನು ಸದಾ ಸ್ಮರಿಸುತ್ತೇನೆ. ಎಂದರು.
ಶಿಕ್ಷಕಿ ಶ್ಯಾಮಲಾ ಕೆರೆಗದ್ದೆ, ಅಡಿಗೆ ಸಿಬ್ಬಂದಿಯವರಾದ ಪವಿತ್ರಾ ಪಟಗಾರ್‌, ಶೋಭಾ ಕಬ್ಬರಗಿ ಮಾತನಾಡಿದರು. ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಖೈರೂನ್‌ ಶೇಖ್‌, ಪ್ರೇಮಾ ಗಾಂವ್ಕರ್‌, ಮೇಧಾ ಭಟ್ಟ, ಲಕ್ಷ್ಮಿ ಮುರಕುಂಬಿ, ಉಪಸ್ಥಿತರಿದ್ದರು. ಮೇಧಾ ಸಂಗಡಿಗರ ಪ್ರಾಥನೆ. ಶಿಕ್ಷಕರಾದ ಶ್ರೀಧರ ಭಟ್ಟ ಸ್ವಾಗತಿಸಿ, ನಿರ್ವಹಿಸಿದರು. ಮಹೇಶ ನಾಯ್ಕ ಸನ್ಮಾನ ಪತ್ರ ವಾಚಿಸಿದರು. ಗೀತಾ.ಎಚ್‌.ವಿ ವಂದಿಸಿದರು.

loading...