ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಸ್ಮರಣೀಯ: ನ್ಯಾ. ತೆಂಡ್ರಲ್‌

0
21
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಸ್ಮರಣೀಯ. ಸಂಸಾರ ನಿರ್ವಹಣೆಯ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ. ತಾಳ್ಮೆ, ಸಹನಾಶಕ್ತಿಯೆ ಮಹಿಳೆಯರನ್ನು ಎತ್ತರಕ್ಕೇರಿಸಿದೆ. ಭವಿಷ್ಯದ ಆದರ್ಶ ನಾಗರೀಕರನ್ನು ಸಮಾಜಕ್ಕೆ ನೀಡುವ ಗುರುತರ ಜವಾಬ್ದಾರಿಯು ಮಹಿಳೆಯರ ಮೇಲಿದೆ ಎಂದು ನಗರದ ಸಿವಿಲ್‌ ನ್ಯಾಯಾಧೀಶೆ ನ್ಯಾ. ತೆಂಡ್ರಲ್‌.ಕೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಅಜಿತ ನಾಯಕ ಅವರು ಸಮಾಜದ ಪ್ರತಿಯೊಂದು ಕುಟಂಬದ ಉನ್ನತಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಎಲ್ಲವನ್ನು ನಿಭಾಯಿಸುವ ಕರುಣಾಮಯಿ ಮಹಿಳೆಯರನ್ನು ಎಲ್ಲರು ಗೌರವಿಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ಅಭಿಯೋಜಕ ಆನಂದ.ಕೂಣ್ಣುರ, ವಕೀಲರುಗಳಾದ ವಿ.ಆರ್‌.ಹೆಗಡೆ, ಎಚ್‌.ಎಸ್‌.ಕುಲಕರ್ಣಿ, ಅನಿತಾ ಸೋಮಕುಮಾರ್‌ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರುಗಳಾದ ಸೋಮಕುಮಾರ.ಎಸ್‌, ಎಮ್‌.ಸಿ.ಹೆಗಡೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಾಟಿವೈದ್ಯೆ ಖುತಿಜಾಬಿ.ಹೈದರಖಾನ.ಪಠಾಣ, ಸಮಾಜ ಸೇವಕಿ ಲಿಲಾವತಿ ಕೊಳಚಿ, ಪರಿಚಾರಕಿ ಮಂಜುಳಾ.ಆರ್‌ಹರಿಜನ್‌ ಇವರುಗಳನ್ನು ಸನ್ಮಾನಿಸಲಾಯಿತು. ವಕೀಲರುಗಳಾದ ಅನಿತಾ.ಎಸ್‌ ಸ್ವಾಗತಿಸಿದರು. ಆರ್‌.ವಿ.ಗಡೆಪ್ಪನವರ ನಿರೂಪಿಸಿ, ವಂದಿಸಿದರು.

loading...