ಸರಕಾರದಿಂದ ಚಿಕ್ಕೋಡಿ-ಸದಲಗಾ ಮತಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಪ್ರಕಾಶ ಹುಕ್ಕೇರಿ

0
16
loading...

ಕನ್ನಡಮ್ಮ ಸುದ್ದಿಚಿಕ್ಕೋಡಿ 24: ಚಿಕ್ಕೋಡಿ-ಸದಲಗಾ ಮತಕ್ಷೇತ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಪಡಿಸುತ್ತಿದ್ದು, ಬರುವ ವಿಧಾನಸಭೆ ಚುನಾವಣೆಯಲ್ಲಿ ಗಣೇಶ ಹುಕ್ಕೇರಿ ಅವರನ್ನು ಬೆಂಬಲಿಸಬೇಕು ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.ತಾಲೂಕಿನ ಟಾಂಗ್ಯಾನಕೋಡಿ ಗ್ರಾಮದ ಬಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನ ಚಿಕ್ಕೋಡಿ ಪಟ್ಟಣದಿಂದ ಟಾಂಗ್ಯಾನಕೋಡಿ ವರೆಗಿನ ರಸ್ತೆ ಸುಧಾರಣೆಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 2.50 ಕೋಟಿ, ನಾಗರಾಳ-ಸದಲಗಾ ರಸ್ತೆಯಲ್ಲಿ ಬ್ರೀಜ್‌ ನಿರ್ಮಾಣಕ್ಕೆ ಒಂದು ಕೋಟಿರೂ.ಮರಗಾದೇವಿ ದೇವಸ್ತಾನದ ಯಾತ್ರಿ ನಿವಾಸಕ್ಕೆ 50 ಲಕ್ಷ ರೂ.ಗಳ ಮತ್ತು ಅಂಬೇಡ್ಕರ ಭವನಕ್ಕೆ 20ಲಕ್ಷ ಮತ್ತು ಅಂಗನವಾಡಿ ನಿರ್ಮಾಣಕ್ಕೆ 12 ಲಕ್ಷ ರೂ.ಗಳ ಅನುದಾನ ಮಂಜೂರಾಗಿದೆ ಎಂದು ಹೇಳಿದರು.ಅಭಿವೃದ್ಧಿಯ ಉದ್ದೇಶವಿಟ್ಟುಕೊಂಡು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಗಣೇಶ ಹುಕ್ಕೇರಿ ಅವರು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದು, ಮುಂಬರುವ ದಿನಮಾನಗಳಲ್ಲಿ ಮತಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಪಡಿಸಲಾಗುವುದು ಎಂದರಲ್ಲದೇ, ರಸ್ತೆ ಮತ್ತು ಯಾತ್ರಿ ನಿವಾಸ ಕಾಮಗಾರಿಗಳನ್ನು ಗುಣಮಟ್ಟದಿಂದ ನೆರವೇರಿಸಬೇಕು. ಈ ರಸ್ತೆ ನಿರ್ಮಾಣದಿಂದ ಈಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ, ಗುಲಾಬ ಬಾಗವಾನ, ಇಸಾ ನಾಯಿಕವಾಡಿ, ಸೂರ್ಯಕಾಂತ ಚೌಗಲಾ, ಗುತ್ತಿಗೆದಾರ ರವಿ ಮಾಳಿ, ಮಲ್ಲಿಕಾರ್ಜುನ ಚೌಗಲಾ ಮುಂತಾದವರು ಉಪಸ್ಥಿತರಿದ್ದರು.

loading...