ಸರ್ಕಾರದ ಹಸ್ತಕ್ಷೇಪ ವಿಷಾಧನೀಯ: ಅಳ್ಳಂಕಿ

0
14
loading...

ಕನ್ನಡಮ್ಮ ಸುದ್ದಿ-ಕುಮಟಾ : ಜಿಲ್ಲೆಯಲ್ಲಿ ಒಟ್ಟೂ 800 ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ, ಸಹಕಾರಿ ಕ್ಷೇತ್ರದಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಸಹಕಾರಿ ಯೂನಿಯನ್‌ ಜಿಲ್ಲಾಧ್ಯಕ್ಷ ವಿ ಎನ್‌ ಭಟ್‌ ಅಳ್ಳಂಕಿ ಹೇಳಿದರು.
ಅವರು ಶನಿವಾರ ಪಟ್ಟಣದ ನಾದಶ್ರೀ ಕಲಾಕೇಂದ್ರದ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಭಾರತಿಯ ವತಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ತಾಲೂಕುಗಳ ಅಭ್ಯಾಸ ವರ್ಗದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಕ್ಷೇತ್ರದ ಸ್ವಾತಂತ್ರ್ಯವನ್ನು ಕಡಿತಗೊಳಿಸಲಾಗಿದೆ. ಸಿಬ್ಬಂದಿಗಳ ನೇಮನೂಕಿ ಅಧಿಕಾರವನ್ನೂ ಸರ್ಕಾರ ಕಸಿದುಕೊಂಡಿದೆ. ಸಾರ್ವಜನಿಕರು ಹೆಚ್ಚಿ ಸಂಖ್ಯೆಯಲ್ಲಿ ಕೈಜೋಡಿಸುವ ಮೂಲಕ ಸಹಕಾರಿ ಕ್ಷೇತ್ರವನ್ನು ಪ್ರೋತ್ಸಾಹಿಸಿ ಬೆಳವಣಿಗೆಯತ್ತ ಕೊಂಡೊಯ್ಯಬೇಕು ಎಂದರು.
ಡಾ ವಿ ಜಿ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಎಲ್ಲರೂ ಸಹಕಾರಿ ಮನೋಭಾವದಿಂದ ನಡೆದುಕೊಂಡರೆ ಮಾತ್ರ ಸಹಕಾರಿ ಕ್ಷೇತ್ರ ಶಯಸ್ಸಿನತ್ತ ಸಾಗಬಹುದಾಗಿದೆ ಎಂದರು.
ಶಿರಸಿಯ ಕದಂಬಾ ಸಂಸ್ಥೆಯ ಅಧ್ಯಕ್ಯ ಶಂಭುಲಿಂಗ ಹೆಗಡೆ, ಪ್ರಮುಖರಾದ ಸುರೇಶ್ಚಂದ್ರ ಹೆಗಡೆ, ಮೋಹನದಾಸ ನನಾಯ್ಕ, ಮಂಜುನಾಥ, ಜಿ ಎಸ್‌ ಗುನಗಾ, ಡಾ ಜಿ ಜಿ ಹಹೆಗಡೆ, ನಾಗರಾಜ ನಾಯ್ಕ ತೊರ್ಕೆ, ಕೆ ಜೆ ಭಟ್‌ ಕೆಕ್ಕಾರ, ಪ್ರಶಾಂತ ನಾಯ್ಕ, ಸುಧಾ ಗೌಡ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಹೇಮಂತಕುಮಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಂದ್ರು ದೇವಾಡಿಗ ವಂದೇ ಮಾತರಂ ಹಾಡಿದರು.

loading...