ಸವಾಲನ್ನು ಸ್ವೀಕರಿಸುವ ಜರುರತ್ತು ಅನಂತಕುಮಾರರವರಿಗಿಲ್ಲ: ರೋಶನ

0
15
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ 6 ವಿಧಾನಸಭಾ ಕ್ಷೇತ್ರ ಅಷ್ಟೇ ಅಲ್ಲ, ರಾಜ್ಯದ ಯಾವುದೇ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ನಿಂತರೂ ಗೆದ್ದು ಬರಬಲ್ಲ ವರ್ಚಸ್ಸನ್ನು ಹಾಗೂ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆಂದು ಉ.ಕ ಜಿಲ್ಲೆಯ ಕಾರ್ಮಿಕ ಪ್ರಕೋಸ್ಟದ ಜಿಲ್ಲಾ ಸಂಚಾಲಕ ರೋಶನ ನೇತ್ರಾವಳಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಅವರು ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌. ಘೊಟ್ನೇಕರ್‌ ಧೈರ್ಯವಿದ್ದರೆ ಅನಂತಕುಮಾರ ಹೆಗಡೆಯವರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಿದರೆ ವಿ.ಪ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ನೀಡಿರುವ ಪತ್ರಿಕಾ ಗೋಷ್ಠಿಯ ಸವಾಲನ್ನು ಪ್ರಶ್ನೀಸಿ ಈ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿಯ ಅನಂತಕುಮಾರ ಹಳಿಯಾಳ ವಿಧಾನ ಸಭಾ ಕ್ಷೇತ್ರದಿಂದ ಗೆದ್ದರೆ ವಿಧಾನ ಪರಿಷತ್ತ್‌ ಸದಸ್ಯ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಏಕೆಂದರೆ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಕೊನೆಯ ಮುಖ್ಯಮಂತ್ರಿಯಾಗಿ ಇತಿಹಾಸ ಪುಸ್ತಕದಲ್ಲಿ ದಾಖಲಾಗಲಿದ್ದಾರೆ. ಹಾಗೂ ಇನ್ನು ಮುಂದೆ ತಾವು ಮಕ್ಕಳಿಗೆ-ಮೊವiಕ್ಕಳಿಗೆ ಕಾಂಗ್ರೆಸ್‌ ಪಕ್ಷ ಒಂದು ಕಾಲದಲ್ಲಿ ಇತ್ತು ಎಂದು ಕಥೆ ಹೇಳಬಹುದು. ಅಶೋಕ ಖೇಣಿಯ ನೈಸ್‌ ಕಂಪನಿಯ ಕರ್ಮಕಾಂಡವನ್ನು ಬಯಲಿಗೆಳೆಯುತ್ತೇನೆಂದ ಸಿದ್ದರಾಮಯ್ಯನವರು ಕಾಂಗ್ರೆಸ್‌ ಪಕ್ಷಕ್ಕೆ ಅವರನ್ನು ಸ್ವಾಗತಿಸಿದ್ದು ಕಾಂಗ್ರೆಸ್‌ ಪಕ್ಷದವರು ದುಡ್ಡು ಕೊಡುವವರಿದ್ದರೆ ದಾವೂದ್‌ ಇಬ್ರಾಹಿಂನನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವಿರಿ ಆದ್ದರಿಂದ ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌. ಘೊಟ್ನೇಕರ್‌ ತಮ್ಮ ಭವಿಷ್ಯದ ಬಗ್ಗೆ ಚಿಂತಿಸಲಿ ಎಂದು ಪತ್ರಿಕೆ ಹೇಳಿಕೆ ನೀಡಿದ್ದಾರೆ.

loading...