ಸಾಂಸ್ಕೃತಿಕ ಕಾರ್ಯಗಳನ್ನು ಒಂದೇ ವೇದಿಕೆಯಲ್ಲಿ ಯೋಜಿಸುವುದು ಕಷ್ಟಸಾಧ್ಯ: ಮಾಣಿ ಗೌಡ

0
17
loading...

ಕನ್ನಡಮ್ಮ ಸುದ್ದಿ-ಕುಮಟಾ: ಸಮಾಜದ ಎಲ್ಲ ವರ್ಗದವರನ್ನೂ ಒಂದೆಡೆ ಸೇರಿಸುವ ಕಾರ್ಯ ಅತಿಮಹತ್ವದ್ದು. ಅದೊಂದು ಮಹಾಕಾರ್ಯ ಅದರಲ್ಲೂ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಗಳನ್ನು ಒಂದೇ ವೇದಿಕೆಯಲ್ಲಿ ಯೋಜಿಸುವುದು ಕಷ್ಟಸಾಧ್ಯ ಎಂದು ನಿವೃತ್ತ ಸೈನಿಕ ಮಾಣಿ ಗೌಡ ಬೈಲಗದ್ದೆ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕತಗಾಲ ಸಾಗಡಿಬೇಣದ ಮಹಾಸತಿ ದೇವಸ್ಥಾನದ ವರ್ಧಂತಿಯ ಏಕಾದಶಮಾನೋತ್ಸವ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದೂ ಕೂಡ ಒಂದು ಕಲೆಯಾಗಿದೆ. ಸಂಯೋಜಕರಾದ ಗಜಾನನ ಗೌಡರು ಆರ್ಥಿಕ ಅನುಕೂಲತೆ ಇಲ್ಲದಿದ್ದರೂ ತಮ್ಮ ಇಚ್ಛಾಶಕ್ತಿಯಿಂದ ಕಳೆದ 10 ವರ್ಷಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೆಯ ವಿಷಯ. ಸ್ವಗ್ರಾಮದಲ್ಲಿ ಇಂತಹ ಗೌರವ ಸ್ವೀಕರಿಸಿದಾಗ ಸೇನೆಯಲ್ಲಿ ಸೇವೆ ಸಲ್ಲಿ ದೇಶ ಕಟ್ಟುವ ಕೆಲಸ ಮಾಡಿದ್ದು ಸಾರ್ಥಕ ಎನೆಸುತ್ತದೆ ಎಂದರು.
ಡಾ ಕೆ ಗಣಪತಿ ಭಟ್ಟ, ಎಚ್‌ ಎನ್‌ ಅಂಬಿಗ, ಹುಲಿಯಮ್ಮ ಗಂಗೂ ಗೌಡ, ಸುಮಂಗಲಾ ಭಟ್ಟ, ನಾಗು ಗೌಡ, ನಾಗವೇಣಿ ಗಜಾನನ ಭಂಡಾರಿ, ವಿಜಯಾ ಗೌಡ ಸಂತೋಷ, ಈಶ್ವರ ಗೌಡ ಮುಂತಾದವರು ಉಪಸ್ಥಿತರಿದ್ದರು. ಶಿರಗುಂಜಿ ಗೋಪಾಲಕೃಷ್ಣ ಭಟ್ಟ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಜರುಗಿದ ಪ್ರತಿಷ್ಠಾಪನ ಧಾರ್ಮಿಕ ಕಾರ್ಯಕ್ರಮವನ್ನು ವೇ ಮೂ ಕೃಷ್ಣ ಭಟ್ಟ ಹಾಗೂ ಉಮೇಶ ಭಟ್ಟ ಅವರ ತಂಡದವರು ನೆರವೇರಿಸಿಕೊಟ್ಟರು. ಸಂಜೆ ಉಪ್ಪಿನಪಟ್ಟಣದ ಶ್ರೀಲಕ್ಷ್ಮೀವೇಂಕಟೇಶ ಭಜವಾ ಮಂಡಳಿ ಹಾಗೂ ಕತಗಾಲದ ಸಿದ್ಧಿವಿನಾಯಕ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಸೇವೆ ಜರುಗಿತು.

loading...