ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ

0
24
loading...

ಕುಮಟಾ: ಯಶೋಧರ ನಾಯ್ಕ ಟ್ರಸ್ಟ್‌ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕುಮಟಾ-ಹೊನ್ನಾವರ ಭಾಗದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಯಶೋಧರ ನಾಯ್ಕ ರವರು ಸನ್ಮಾನಿಸಿ ಗೌರವಿಸಿದರು.
ಟ್ರಸ್ಟ್‌ ವತಿಯಿಂದ ಸಾಲ ಪಡೆದು ಹೈನುಗಾರಿಕೆ ಮಾಡುತ್ತಿರುವ ಹೊನ್ನಾವರದ ಮಠದಕೆರಿಯ ನಿವಾಸಿ ಸಂಗಿತಾ ಜೋಸೆಫ್‌ ಡಿಸೋಜ, ಸಮಾಜ ಸೇವಕರಾದ ಕುಸುಮಾ ವಿಜಯ ದೇವಾಡಿಗ, ಸುಶೀಲಾ ಎನ್‌ ನಾಯ್ಕ. ಲೀಲಾವತಿ ಎಮ್‌ ಅಂಬಿಗ, ನಾಟಿ ವೈದ್ಯರಾದ ಪಾರ್ವತಿ ಗೋವಿಂದ ನಾಯ್ಕ, ಮಹಾಲಕ್ಷ್ಮೀ ವಿ ಪಟಗಾರ, ತಾರಾ ಎನ್‌ ಹರಿಕಾಂತ, ಜಾನಪದ ಗಾಯಕಿ ಗಂಗೆ ನಾಗು ಮುಕ್ರಿ, ನಿವೃತ್ತ ಕೆನರಾ ಬ್ಯಾಂಕ್‌ ಉದ್ಯೋಗಿ, ಶೋಭಾ ಕುಲಕರ್ಣಿ, ಶಿಕ್ಷಕಿ ಜಾನಕಿ ಹೆಗಡೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

loading...