ಸಾರ್ವಜನಿಕರು ಸರ್ಕಾರಿ ಸಾರಿಗೆಗಳಲ್ಲಿ ಪ್ರಯಾಣಿಸಿ: ಸಚಿವ ದೇಶಪಾಂಡೆ

0
21
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಸುಸಜ್ಜಿತವಾದ ಬಸ್‌ ಡಿಪೋದ ಉದ್ಘಾಟನಾ ಸಮಾರಂಭವು ಶನಿವಾರ ನೆರವೇರಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವಿ. ದೇಶಪಾಂಡೆ ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಜ್ಯೋತಿ ಬೆಳಗಿಸಿದರು.
ಸಮಾರಂಭವನ್ನು ಉದ್ದೇಶಿಸಿ ಅಧ್ಯಕ್ಷತೆ ವಹಿಸಿದ್ದ ಸಚಿವ ಆರ್‌. ವಿ. ದೇಶಪಾಂಡೆ ಮಾತನಾಡಿದರು. ರಾಜ್ಯ ಸರ್ಕಾರವು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದೆ. ಸಾರಿಗೆ ಸಂಸ್ಥೆಯ ಬೆಳವಣಿಗೆಗೂ ಕೂಡ ಸಕಲ ಸಹಾಯ-ಸಹಕಾರ ನೀಡಿದೆ. ನೂತನ ಬಸ್‌ ಡಿಪೋ ನಿರ್ಮಾಣ ಮಾಡಲಾಗಿದ್ದು, ಹಲವಾರು ವರ್ಷಗಳಿಂದ ಇರುವ ಡಿಪೋವನ್ನು ಇಲ್ಲಿಗೆ ಸ್ಥಳಾಂತರಿಸಿದ ನಂತರ ಹಳೆಯ ಡಿಪೋ ಮತ್ತು ಬಸ್‌ ನಿಲ್ದಾಣವನ್ನು ತೆರವುಗೊಳಿಸಿ ಅಲ್ಲಿ ರಾಜ್ಯದಲ್ಲಿಯೇ ಅತ್ಯಂತ ಆಧುನಿಕತೆಯಿಂದ ಕೂಡಿದ ಹೈಟೆಕ್‌ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಶ್ರೀಕಾಂತ ಘೋಟ್ನೆಕರ, ವಾಕರಸಾಸಂಸ್ಥೆ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬಿ. ನಾಯಕ, ಸಲಹಾ ಸಮಿತಿ ನಿರ್ದೇಶಕ ಪ್ರಸನ್ನ ಗಾವಡಾ, ಮುಖ್ಯ ಕಾಮಗಾರಿ ಅಭಿಯಂತ ಟಿ.ಕೆ. ಪಾಲನೇತ್ರನಾಯಕ್‌, ಗುತ್ತಿಗೆದಾರ ರೋಲ್ಯಾಂಡ್‌ ಫರ್ನಾಂಡೀಸ್‌, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಮಹೇಶ್ರೀ ಮಿಶ್ಯಾಳಿ, ಲಕ್ಷ್ಮೀ ಕೋರ್ವೆಕರ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಉಪಾಧ್ಯಕ್ಷ ಅರುಣ ಬೋಬಾಟಿ ಹಾಗೂ ಸದಸ್ಯರು, ತಾಲೂಕ ಪಂಚಾಯತ ಅಧ್ಯಕ್ಷೆ ರೀಟಾ ಸಿದ್ಧಿ, ಬಗರಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಸುಭಾಸ ಕೋರ್ವೆಕರ ಮೊದಲಾದವರು ಪಾಲ್ಗೊಂಡಿದ್ದರು.

loading...