ಸುಟ್ಟ ಟಿಸಿ ಮೇಲೆ ಕುಳಿತು ಪ್ರತಿಭಟನೆ

0
18
loading...

ಕನ್ನಡಮ್ಮ ಸುದ್ದಿ-ಆಲಮಟ್ಟಿ: ಸುಟ್ಟ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕೂಡಿಸಿದ್ದನ್ನು ಖಂಡಿಸಿ, ಹೊಸ ಟಿಸಿ ಕೂಡಿಸುವವರೆಗೂ ಟಿಸಿ ಮೇಲೆಯೇ ಕುಳಿತು ಪ್ರತಿಭಟಿಸಿದ ನಡೆಸಿದ ಘಟನೆ ಮಂಗಳವಾರ ಸಮೀಪದ ಅಡಕಲಗುಂಡಪ್ಪ ದೇವಸ್ಥಾನದ ಹತ್ತಿರ ರುಗಿದೆ.
ಅಡಕಲಗುಂಡಪ್ಪ ದೇವಸ್ಥಾನದ ಸಮೀಪ, ರೈತರ ಜಮೀನಿನಲ್ಲಿ ಹಾಕಿದ್ದ ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ ಕಳೆದ ತಿಂಗಳು 28 ರಂದೇ ಸುಟ್ಟಿದೆ. ಆದರೆ ಮಾ 26 ರಂದು ಹೆಸ್ಕಾಂನವರು ಸುಟ್ಟ ಟಿಸಿಯನ್ನು ಅಳವಡಿಸಿದ್ದಾರೆ. ಸುಟ್ಟ ಟಿಸಿ ಕೂಡಿಸಿದ ಪರಿಣಾಮ ಸಿಡಿದೆದ್ದ ರೈತರು ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಆಲೂರ ಹಾಗೂ ನಿಡಗುಂದಿ ತಾಲ್ಲೂಕು ಘಟಕದ ಉಪಾಧ್ಯಕ್ಷ ವೆಂಕಟೇಶ ಬಂಡಿವಡ್ಡರ ಸುಟ್ಟ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಮೇಲೆಯ ಕುಳಿತು ಪ್ರತಿಭಟನೆ ಆರಂಭಿಸಿದರು. ಸ್ಥಳಕ್ಕೆ ಬಂದ ನಿಡಗುಂದಿ ಹೆಸ್ಕಾಂ ಶಾಖಾಧಿಕಾರಿ ಶಾಂತು ಹಾವರಗಿ, ಇಂದೇ ಟಿಸಿ ಕೂಡಿಸಲಾಗುವುದು ಪ್ರತಿಭಟನೆ ಹಿಂದಕ್ಕೆ ಪಡೆಯಬೇಕೆಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ರೈತರು ಟಿಸಿ ಕೂಡಿಸುವವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದರು.
ಕೆಲವೇ ಗಂಟೆಗಳಲ್ಲಿ ವಿದ್ಯುತ್‌ ಟಿಸಿ ಬಸವನಬಾಗೇವಾಡಿಯಿಂದ ತರಿಸಿ ಕೂಡಿಸಲಾಯಿತು.
ಟಿಸಿ ಮೇಲೆ ಕುಳಿತಿದ್ದ ಲಿಂಗರಾಜ ಆಲೂರ ಹಾಗೂ ವೆಂಕಟೇಶ ಬಂಡಿವಡ್ಡರ ಅವರನ್ನು ಅಧಿಕಾರಿಗಳು ಹಾಗೂ ರೈತರು ಕೆಳಕ್ಕೆ ಇಳಿಸಿದರು.
ಪ್ರತಿಭಟನೆಯಲ್ಲಿ ಗೋಪಾಲ ಬಂಡಿವಡ್ಡರ, ಶಿವಪ್ಪ ಪಾಟೀಲ, ರಾಮಸ್ವಾಮಿ ಬಂಡಿವಡ್ಡರ, ಮೋಸಿಸಾಬ್‌ ಬಾಣಕಾರ, ವೀರಭದ್ರಯ್ಯ ಗಣಾಚಾರಿ, ಈರಪ್ಪ ಶೆಟ್ಟರ, ಚನ್ನಬಸು ಹುಂಡೇಕಾರ, ಶಿವಯ್ಯ ಗಣಾಚಾರಿ ಮೊದಲಾದವರಿದ್ದರು.

loading...