ಸೋನಿ, ಶಂಕರ ನಾಯ್ಕ ಮೇಲಿನ ಪ್ರಕರಣ ಕೈಬಿಡಲು ಒತ್ತಾಯ

0
22
loading...

ಕನ್ನಡಮ್ಮ ಸುದ್ದಿ-ಕಾರವಾರ: ಬಿಜೆಪಿ ಮುಖಂಡರಾದ ಸೂರಜ ನಾಯ್ಕ ಸೋನಿ ಹಾಗೂ ಶಂಕರ ನಾಯ್ಕ ಇವರ ಮೇಲೆ ದುರುದ್ದೇಶಪೂರ್ವಕವಾಗಿ ಪೊಲೀಸ್‌ ಪ್ರಕರಣ ದಾಖಲಿಸಲಾಗಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿ ಜಿಲ್ಲಾ ನಾಮಧಾರಿ ಆರ್ಯಈಡಿಗ ಅಭಿವೃದ್ಧಿ ಸಂಘದವತಿಯಿಂದ ಮಂಗಳವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಾಮಾಜಿಕ ಹೋರಾಟಗಳ ಮೂಲಕ ಸಾರ್ವಜನಿಕರ ಕುಂದು ಕೊರತೆಯ ಬಗ್ಗೆ ಕೂಡಲೇ ಸ್ಪಂದಿಸುವವರಾಗಿದ್ದಾರೆ. ಆದರೆ ಇವರಿಬ್ಬರ ಮೇಲೆ ದುರುದ್ದೇಶ ಪೂರ್ವಕವಾಗಿ ಪೊಲೀಸ್‌ ಪ್ರಕರಣ ದಾಖಲಿಸಿ ಅವರ ಕುಟುಂಬದವರಿಗೆ ಹಾಗೂ ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಆದ್ದರಿಂದ ಇಬ್ಬರ ವಿರುದ್ಧ ವಿನಾಕಾರಣ ದಾಖಲಿಸಲಾದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು. ಅಲ್ಲದೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಪ್ರಮುಖ ಪದಾಧಿಕಾರಿಗಳಾದ ಅಂಕೋಲಾ ತಾಲೂಕಿನ ಗಜಾನನ ಆರ್‌. ನಾಯ್ಕ, ಯಲ್ಲಾಪುರದ ಸೋಮೇಶ್ವರ ನಾಯ್ಕ, ಭಟ್ಕಳದ ವಾಸು ನಾಯ್ಕ, ನವೀನ ನಾಯ್ಕ, ಬಂಕಿಕೊಡ್ಲದ ಹರೀಶ ನಾಯ್ಕ, ಕುಮಟಾದ ದಿವಾಕರ ನಾಯ್ಕ, ಗಂಗಾವಳಿಯ ಸಂತೋಷ ನಾಯ್ಕ ಮುಂತಾದವರು ಇದ್ದರು.

loading...