ಸೋನಿ ಶೀಘ್ರ ಬಿಡುಗಡೆಯಾಗಲೆಂದು ಪ್ರಾರ್ಥಿನೆ

0
21
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ದೀವಗಿಯ ಈಶ್ವರ ದೇವಸ್ಥಾನದಲ್ಲಿ ಮಂಗಳವಾರ ಸೂರಜ್‌ ನಾಯ್ಕ ಸೋನಿ ಅಭಿಮಾನಿ ಬಳಗ ಮತ್ತು ಬಿಜೆಪಿ ಕಾರ್ಯಕರ್ತರು ಗಣ ಹೋಮ ನೆರವೇರಿಸಿ, ಅಕ್ರಮ ಗೋ ಸಾಗಣೆದಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರಾದ ಬಿಜೆಪಿ ಮುಖಂಡ ಸೂರಜ ನಾಯ್ಕ ಸೋನಿ ಅವರು ಶೀಘ್ರ ಬಿಡುಗಡೆಯಾಗಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ ಮಾತನಾಡಿ, ಸೂರಜ ನಾಯ್ಕ ಸೋನಿ ಅವರು ಕರ್ಕಿಯಲ್ಲಿ ನಡೆದ ಅಕ್ರಮ ಗೋ ಸಾಗಣೆಯನ್ನು ತಡೆದಿದ್ದಕ್ಕೆ ಅವರ ಮೇಲೆ ಕೊಲೆ ಯತ್ನ ಕಲಂ 307ರ ಅಡಿ ಪ್ರಕರಣ ದಾಖಲಿಸಿದ ಪೊಲೀಸರು ಅವರನ್ನು ದೆಹಲಿಯ ಫರೀದಾಬಾದ್‌ನಲ್ಲಿ ಬಂಧಿಸಿದ್ದಾರೆ. ಅವರ ಮೇಲೆ ಅನೇಕ ಭಾರತೀಯ ದಂಡ ಸಂಹಿತೆಯ ಕಲಂಗಳ ಜೊತೆಗೆ ಕೊಲೆ ಯತ್ನದ ಕಲಂ 307 ನ್ನು ಕೂಡಾ ಸೇರಿಸಿ ಪ್ರಕರಣ ದಾಖಲಿಸಿರುತ್ತಾರೆ. ಆದರೆ, ಭಾರತೀಯ ಜನತಾ ಪಕ್ಷದ ಮುಖಂಡರಾಗಿರುವ ಇವರು ಹೊಡೆದಾಟ ಹಾಗೂ ಪ್ರಾಣಕ್ಕೆ ಅಪಾಯ ಮಾಡುವಂತಹ ಯಾವುದೇ ಕೆಲಸವನ್ನು ಯಾವತ್ತೂ ಮಾಡಿರುವುದಿಲ್ಲ. ಆದರೆ ರಾಜಕೀಯ ದುರುದ್ಧೇಶದಿಂದ ಭಾರತೀಯ ದಂಡ ಸಂಹಿತೆ ಕಲಂ 307ನ್ನು ಸೇರಿಸಿದ್ದನ್ನು ನೋಡಿದರೆ ಸೂರಜ ನಾಯ್ಕ ಸೋನಿ ಇವರ ಈ ಮೇಲಿನ ಪ್ರಕರಣದ ಹಿಂದೆ ಪ್ರಬಲ ರಾಜಕೀಯ ವಿರೋಧಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ರಾಜಕೀಯ ದುರುz್ದೇಶದಿಂದಲೇ ಸೂರಜ ಅವರ ವಿರುದ್ಧ ಪೊಲೀಸ್‌ ಇಲಾಖೆ ಸುಳ್ಳು ಪ್ರಕರಣ ದಾಖಲಿಸಿ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಅವರ ಅಗತ್ಯತೆ ತೀರಾ ಇದೆ. ಅವರು ಶೀಘ್ರ ಬಂಧನ ಮುಕ್ತರಾಗಬೇಕೆಂದು ಶಿವನಲ್ಲಿ ಪ್ರಾರ್ಥಿಸಿ, ಈ ಹವನ ನಡೆಸಿz್ದೇವೆ ಎಂದರು.
ಪ್ರಮುಖರಾದ ಆನಂದ ಭಂಡಾರಿ, ಗಣಪತಿ ಅಂಬಿಗ, ಅನಿಲ ಭಂಡಾರಿ, ವಿನು ಭಂಡಾರಿ, ಸಚೀನ ನಾಯ್ಕ, ನಾರಾಯಣ ಗೌಡ, ಶಂಕರ ನಾಯ್ಕ, ಸುಭಾಸ ಅಂಬಿಗ, ದಿನೇಶ ನಾಯ್ಕ, ಗಿರೀಶ ಅಂಬಿಗ, ಭಾಸ್ಕರ ಗೌಡ, ಅಣ್ಣಪ್ಪ ನಾಯ್ಕ ಹಾಗೂ ಸೂರಜ ನಾಯ್ಕ ಸೋನಿ ಅವರ ಅಭಿಮಾನ ಬಳಗದವರು ಉಪಸ್ಥಿತರಿದ್ದರು.

loading...