ಸ್ಥಳೀಯ ಕರಾಟೆ ತರಬೇತುದಾರರಿಗೆ ಆದ್ಯತೆ ನೀಡಲು ಸಿಇಒ ಕರೆ

0
15
loading...

ಕನ್ನಡಮ್ಮ ಸುದ್ದಿ-ಕಾರವಾರ: ಸರಕಾರಿ ಪ್ರೌಢಶಾಲೆಗಳಲ್ಲಿ ಕಲಿಯುತ್ತಿರುವ ಬಾಲಕಿಯರಿಗೆ ಮೂರು ತಿಂಗಳು ಕರಾಟೆ ತರಬೇತಿ ನೀಡುವ ಯೋಜನೆಯಿಂದ ಬಾಲಕಿಯರಿಗೆ ಸ್ವರಕ್ಷಣೆಗೆ ಸಹಕಾರಿಯಾಗಿದೆ. ಇಂತಹ ಕರಾಟೆ ತರಬೇತಿಗೆ ಸ್ಥಳಿಯ ತರಬೇತುದಾರರಿಗೆ ಆದ್ಯತೆ ಕೊಡಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಅವರಿಗೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಸೂಚಿಸಿದರು.
ಕಾರ್ಮಿಕ ಕಾಯಿದೆ ಉಲ್ಲಂಘನೆ : ವಿವಿಧ ಇಲಾಖೆಗಳಲ್ಲಿರುವ ಹೊರಮೂಲ ಸಿಬ್ಬಂದಿಗಳ ವೇತನಕ್ಕೆ ಸಂಬಂದಿಸಿದಂತೆ ಸಾಕಷ್ಟು ದೂರುಗಳು ಕೇಳಿ ಬಂದಿರುತ್ತವೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆಗೆ ಸೂಚಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಮಿಕ ಕಾಯಿದೆ ಉಲ್ಲಂಘನೆ ಆಗುತ್ತಿದೆ. ಕಾರ್ಮಿಕ ಇಲಾಖೆ ಕೇವಲ ಅವಲೋಕನ ಮಾಡಿ ಕುಳಿತುಕೊಳ್ಳುವದಲ್ಲ. ಕಾರ್ಮಿಕರ ಕಾಳಜಿ ವಹಿಸಿಕೊಳ್ಳುವುದೇ ಕಾರ್ಮಿಕ ಇಲಾಖೆ ಕೆಲಸವಾಗಿದೆ. ಇಲಾಖೆಯು ಕಾರ್ಮಿಕ ಕಾಯಿದೆ ಕುರಿತು ಕಾರ್ಯಗಾರ ಹಮ್ಮಿಕೊಳ್ಳಬೇಕು ಮತ್ತು ಹೊರಮೂಲ ಸಿಬ್ಬಂದಿ ಪೊರೈಸುವ ಏಜೆನ್ಸಿಗಳಿಗೆ ಸ್ಪಷ್ಟವಾಗಿ ಹೇಳಿ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ ಸಿ.ಇ.ಒ ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಜಯಶ್ರೀ ಮೋಗೇರ, ಉಪಾಧ್ಯಕ್ಷ ಸಂತೋಷ ರೇಣಕೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...