ಹಾಲಪ್ಪ ಆಚಾರ ಶಾಸಕರಾಗಿವುದು ಖಚಿತ: ಪೋಲಿಸ್‌ಪಾಟೀಲ್‌

0
18
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ತಾಲೂಕಿನ ತಳಕಲ್‌ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಪಕ್ಷದ ನಿಯೋಜಿತ ಅಭ್ಯರ್ಥಿ ಹಾಲಪ್ಪ ಆಚಾರ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಶಾಸಕರಾಗಿ ಆಯ್ಕೆಯಾಗುವದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ಪಕ್ಷದ ಮುಖಂಡ ಸಿ.ಎಚ್‌. ಪೋಲಿಸ್‌ ಪಾಟೀಲ್‌ ಹೇಳಿದರು.
ತಾಲೂಕಿನ ತಳಕಲ್‌ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಭಾನುವಾರ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಶಕ್ತಿ ಕೇಂದ್ರದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಹಾಲಪ್ಪ ಆಚಾರ ರೈತರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಯಲಬುರ್ಗಾ ತಾಲೂಕಿಗೆ ನೀರಾವರಿ ಯೋಜನೆಯನ್ನು ಜಾರಿ ಮಾಡಲೇಬೇಕು ಎನ್ನುವ ಉದ್ದೇಶದಿಂದ ಸತತವಾಗಿ ಹೋರಾಟ ಮಾಡುತ್ತಿದ್ದಾರೆ. ಈ ಮೂಲಕ ತಾಲೂಕನ್ನು ಸಂಪೂರ್ಣವಾಗಿ ಹಸಿರನ್ನಾಗಿ ಕಂಗೊಳಿಸಲು ಶತ ಪ್ರಯತ್ನ ನಡೆಸಿದ್ದಾರೆ. ಈ ಭಾಗದ ಅನ್ನದಾತರ ಸಂಕಷ್ಟಗಳಿಗೆ ಹಗಲು ರಾತ್ರಿ ಶ್ರಮ ವಹಿಸಿ ಕಾರ್ಯ ಮಾಡುತ್ತಿದ್ದಾರೆ.
ಈ ಹಿಂದೆ ವಿಧಾನ ಪರಿಷತ್‌ ಸದಸ್ಯರಾಗಿ ಆಡಳಿತ ಅವಧಿಯಲ್ಲಿ ತಾಲೂಕಿನ ಬೇವೂರು ಗ್ರಾಮದಲ್ಲಿ ಕೃಷ್ಣಾ ಬಿಸ್ಕೀಂ ಯೋಜನೆಗೆ ಅಡಿಗಲ್ಲು ಹಾಕಿಸಲು ಮೂಂಜೂಣಿ ಪಾತ್ರ ವಹಿಸಿದರು. ಸತತವಾಗಿ ಕೃಷ್ಣಾ ಬಿಸ್ಕೀಂ ಯೋಜನೆ ಅನುಷ್ಠಾನ ಗೊಳಿಸಲು ಕ್ಷೇತ್ರದ 144 ಗ್ರಾಮಗಳಲ್ಲಿ ಬೈಕ್‌ ರ್ಯಾಲಿ ನಡೆಸಿ ಸಾವಿರಾರು ಕಾರ್ಯ ಕರ್ತರೊಂದಿಗೆ ಹೋರಾಟ ಮಾಡಿರುವದು ಹಾಲಪ್ಪ ಆಚಾರ ಜನಪ್ರಿಯತೆಯನ್ನು ಹೆಚ್ಚಿಸಿದೆ. ಯಲಬುರ್ಗಾ ಕ್ಷೇತ್ರ ಮಸಾರಿ,ಎರೆ ಭಾಗದ ಖುಷ್ಕಿ ಪ್ರದೇಶ ಹೊಂದಿದ್ದು.
ಕಳೆದ ಎರಡ್ಮೂರು ವರ್ಷಗಳಿಂದ ಭೀಕರ ಬರಗಾಲ ಊಂಟಾಗಿ ಈ ಭಾಗದ ಜನತೆ ಜಾನವಾರಗಳು ನೀರಿಲ್ಲದೆ ತೊಂದರೆ ಎದುರಿಸಿ ಸಂಕಷ್ಟದಲ್ಲಿ ಕಾಲದೂಡುವ ಅಧಿಕ ಪ್ರಸಂಗ ಎದುರಾಯಿತು. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ರೈತರ ಪಾಲಿಗೆ ವರವಾಗಿ ತಾಲೂಕಿನ ಕರಮುಡಿ, ಲಿಂಗನಬಂಡಿ, ಮಂಡಲಮರಿ ಸೇರಿದಂತೆ ಇತರೆ ಗ್ರಾಮದ ಕೆರೆಗಳಿಗೆ ಜೀವ ಜಲಕ್ಕೆ ಹಗೆಲು ಕೊಟ್ಟು ಸಾವಿರಾರು ಅನ್ನದಾತಹ ಪ್ರಾಣಿ ಪಕ್ಷಿ ಸಂಕುಲಕ್ಕೆ ದಾಹ ಇಂಗಿಸುವ ಸಾಮಾಜಿಕ ಕಾರ್ಯಕ್ಕೆ ಆಚಾರ್‌ ಮುಂದಾದರು. ಇಡೀ ತಾಲೂಕಿನ ಜನತೆಗೆ ಬರಗಾಲದಲ್ಲಿ ನೀರಿನ ದಾಹ ನೀಗಿಸುವ ಮೂಲಕ ಒಳ್ಳೆಯ ಕಾರ್ಯ ಮಾಡಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಅಧಿಕಾರ ಇಲ್ಲದೇ ಇರುವ ಸಮಯದಲ್ಲಿ ಕೂಡಾ ತಮ್ಮ ಜನಪರವಾದ ಕೆಲಸಗಳನ್ನು ಮಾಡಿರುವದು ಜನಸಾಮಾನ್ಯರ ಬಗ್ಗೆ ಆಚಾರಗೆ ಇರುವ ಬದ್ದತೆ ಕಾಳಜಿಯನ್ನು ಸಾಬೀತುಪಡಿಸಿದೆ ಎಂದು ಹೇಳಿದರು. ಎಪಿಎಮ್‌ಸಿ ಸದಸ್ಯ ಹಂಚ್ಯಾಳಪ್ಪ ತಳವಾರ ಮಾತನಾಡಿ ಯಲಬುರ್ಗಾ ಕ್ಷೇತ್ರದ ಮತದಾರರು ಈಗಾಗಲೇ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವದಕ್ಕೆ ಸಂಕಲ್ಪ ಮಾಡಿದ್ದಾರೆ.ಹಾಲಪ್ಪ ಆಚಾರ ಹಾಗೂ ಬಿಜೆಪಿ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಸಾಕಷ್ಟು ಜನರು ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ.
ಈ ಸಲದ ಚುನಾವಣೆಯಲ್ಲಿ ಬಸವರಾಜ ರಾಯರೆಡ್ಡಿಯ ಯಾವುದೇ ಕುಂತತ್ರ ನಡೆಯುವದಕ್ಕೆ ಸಾಧ್ಯವಿಲ್ಲ.ಯಾವುದೇ ಸಮಯದಲ್ಲಿ ಚುನಾವಣೆ ಬಂದರು ಎದುರಿಸುವದಕ್ಕೆ ಬಿಜೆಪಿ ಕಾರ್ಯಕರ್ತರು ಸನ್ನದ್ದರಾಗಿದ್ದಾರೆ. ಹಾಲಪ್ಪ ಆಚಾರವರಿಗೆ ಮತದಾರರು ಈ ಭಾರೀ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಜನಸೇವೆ ಮಾಡುವದಕ್ಕೆ ಅವಕಾಶ ಮಾಡಿಕೊಡುವ ಬಲವಾದ ವಿಶ್ವಾಸವನ್ನು ಪಕ್ಷದ ಮುಖಂಡರು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಪಕ್ಷದ ತಾಲೂಕು ಅಧ್ಯಕ್ಷ ರತನ್‌ ದೇಸಾಯಿ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಶಂಕುತಲಮ್ಮಾ ಮಾಲಿ ಪಾಟೀಲ್‌,ಶರಣಪ್ಪ ಬಣ್ಣದಭಾವಿ,ಶಿವಕುಮಾರ ನಾಗಲಾಪೂರಮಠ ಸೇರಿದಂತೆ ಇನ್ನಿತರ ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಮಯದಲ್ಲಿ ಹಾಲಪ್ಪ ಆಚಾರ ಸಮ್ಮುಖದಲ್ಲಿ ತಳಕಲ್‌ ಗ್ರಾಮದ 30ಕ್ಕೂ ಹೆಚ್ಚು ಯುವಕರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

loading...