ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಬುದ್ಧಿ ಜೀವಿಯೇ : ಹರಿಪ್ರಕಾಶ

0
26
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಭಾರತದ ಶ್ರೇಷ್ಠತೆ ಒಪ್ಪದವರು, ಸಾಂಸ್ಕøತಿಕ ಅಸ್ಮಿತೆ ಪ್ರಶ್ನಿಸುವವರನ್ನು ಬುದ್ಧಿಜೀವಿ ಎಂದು ಭಾವಿಸದೇ ಬುದ್ಧಿ ಇಲ್ಲದ ಜೀವಿಗಳೆಂದು ಪರಿಗಣಿಸಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಹರಿಪ್ರಕಾಶ ಕೋಣೆಮನೆ ಪ್ರತಿಪಾದಿಸಿದರು.
ನಗರದ ಎಸ್.ಜಿ. ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಯುವ ಮಂಥನ ಕಾರ್ಯಾಗಾರದಲ್ಲಿ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಒಂದು ವಿಶ್ಲೇಷಣೆ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಮನುಷ್ಯನಾಗಿ ಹುಟ್ಟಿರುವ ಪ್ರತಿಯೊಬ್ಬರೂ ಬುದ್ಧಿಜೀವಿಗಳೇ ಆಗಿದ್ದು, ಇದರಲ್ಲಿ ಬುದ್ಧಿ ಇರುವವರು, ಇಲ್ಲದವರು ಎಂಬ ಭೇದ ಸರಿಯಲ್ಲ. ಈ ಭೂಮಿ ಮೇಲೆ ಹುಟ್ಟಿದ ಹಾಗೂ ಬುದ್ಧಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಬುದ್ಧಿ ಜೀವಿಯಾಗಿದ್ದಾನೆ. ಜೆಎನ್‍ಯುನಲ್ಲಿ ಓದಿದವರು, ಇತಿಹಾಸವನ್ನು ತಪ್ಪು ವ್ಯಾಖ್ಯಾನ ಮಾಡುವವರು, ಭಾರತದ ಸಾಂಸ್ಕøತಿಕ, ರಾಷ್ಟ್ರೀಯ ಅಸ್ಮಿತೆ ಪ್ರಶ್ನಿಸುವವರು ಬುದ್ಧಿಜೀವಿ ಆಗಲಾರ. ಭಾರತದ ಶ್ರೇಷ್ಠತೆ, ದೇಶದ ಶ್ರೀಮಂತ ಆಚಾರ-ವಿಚಾರ ಕುರಿತು ನಮ್ಮಲ್ಲಿ ಸ್ವಾಭಿಮಾನ ತುಂಬುವವರನ್ನು ಬುದ್ಧಿ ಜೀವಿಗಳೆಂದು ನಿರ್ಭಯದಿಂದ ಹೇಳಬೇಕು. ಆದರೆ, ಭಾರತದ ಸಾಂಸ್ಕøತಿಕ ಅಸ್ಮಿತೆ ಪ್ರಶ್ನಿಸುವವರು ಪರಕಿಯರೇ ಹೊರತು ಈ ನೆಲದ ಬುದ್ಧಿಜೀವಿ ಎಂದು ಪರಿಗಣಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಅಭಿವ್ಯಕ್ತಿ ಸ್ವಾತಂತ್ರ ಮಾಧ್ಯಮದ ವ್ಯಾಪ್ತಿ ಇಂದು ವಿಸ್ತಾರಗೊಂಡಿದೆ. ಈ ಮೊದಲು ಮುದ್ರಣ ಮಾದ್ಯಮ, ಟಿವಿ, ರೇಡಿಯೋ, ಸಾಹಿತ್ಯ, ನಾಟಕದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ ಕಾಣಬಹುದಿತ್ತು. ಆದರೆ ಇಂದು ಸಾಮಾಜಿಕ ಮಾಧ್ಯಮ ವ್ಯಾಪಕವಾಗಿ ಬೆಳೆದಿದೆ. ಇದರಲ್ಲಿ ಯಾರೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಅತಿ ಹೆಚ್ಚು ದುರುಪಯೋಗ ಆಗುತ್ತಿರುವುದೇ ನಮ್ಮ ದೇಶದಲ್ಲಿ. ತಪ್ಪನ್ನು ಪ್ರಶ್ನಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಬಿಂಬಿಸುವ ಹುನ್ನಾರ ವ್ಯಾಪಕವಾಗಿದೆ ಎಂದು ಖೇದ ವ್ಯಕ್ತಪಡಿಸಿದರು. ನಂತರ ಭಾರತೀಯ ಇತಿಹಾಸದ ಶೌರ್ಯ ಪರಂಪರೆಯ ಅವಲೋಕನ ವಿಷಯದ ಕುರಿತು ರಾಜೇಶ ಪದ್ಮಾರ್ ಉಪನ್ಯಾಸ ನೀಡಿದರು.

loading...