ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿ

0
14
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ತಾಲೂಕಿನ ಕಡ್ನೀರಿನ ದಕ್ಷಿಣಕಾಳಿ ಕ್ರೀಡಾ ಸಮಿತಿ ಆಶ್ರಯದಲ್ಲಿ ಹೊನಲು ಬೆಳಕಿನ ಕೌಂಟಿ ಕ್ರಿಕೆಟ್‌ ಪಂದ್ಯಾವಳಿಯು ಕಡ್ನೀರಿನ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದಕ್ಷಿಣಕಾಳಿ ಕ್ರೀಡಾ ಸಮಿತಿಯವರು ಮನರಂಜನೆಗಾಗಿ ಕೌಂಟಿ ಕ್ರಿಕೆಟ್‌ ಎಂಬ ಚಿಕ್ಕ ಆವೃತ್ತಿಯ ಕ್ರಿಕೆಟ್‌ ನ್ನು ಚಿಕ್ಕದಾದ ಕ್ರೀಡಾಂಗಣದಲ್ಲಿನ ಚೊಕ್ಕವಾಗಿ ಆಯೋಜಿಸಿದ್ದಾರೆ.
ಈ ಸಂದರ್ಭದಲ್ಲಿ ಟ್ರೋಫಿ ಅನಾವರಣಗೊಳಿಸಿದ ರವಿಕುಮಾರ ಶೆಟ್ಟಿ ಮಾತನಾಡಿ ಸಂಘಟನೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಈ ಸಮಿತಿಯವರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ಜರುಗಲಿ ಎಂದರು. ತಿಮ್ಮಪ್ಪ ನಾಯ್ಕ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಂಕಣ ಉದ್ಘಾಟಕರಾಗಿ ಆಗಮಿಸಿದ ಜಿ. ಪಂ. ಸದಸ್ಯ ಪ್ರದೀಪ ನಾಯಕ ದೇವರಬಾವಿ, ಚಂದಾವರ ಗ್ರಾ. ಪಂ. ಸದಸ್ಯರಾದ ವಿನಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...