2018-19 ನೇ ಸಾಲಿನ ವಿಶೇಷ ಬಜೆಟ್‌ ಸಭೆ

0
16
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪಟ್ಟಣ ಪಂಚಾಯತಿ 2018-19 ನೇ ಸಾಲಿನ ಬಜೆಟ್‌ ಪ.ಪಂ ಸಭಾಭವನದಲ್ಲಿ ಶಿರೀಷ ಪ್ರಭು ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಂಡಿಸಲಾಯಿತು. ಒಟ್ಟು 11.08 ಕೋಟಿ ರೂ ಆದಾಯದ ಬಜೆಟ್‌ ಇದಾಗಿದ್ದು, 4.37 ಲಕ್ಷ ರೂ ಉಳಿತಾಯದ ಬಜೆಟ್‌ ಆಗಿದೆ.
ವೇತನ ಮತ್ತು ವಿದ್ಯುತ್‌ ಅನುದಾನ 2.87 ಕೋಟಿ, ಎಸ್‌ಎಫ್‌ಸಿ ಅನುದಾನ 2.75 ಕೋಟಿ, 14 ನೇ ಹಣಕಾಸು ಅನುದಾನ 3.80 ಕೋಟಿ ನಿರೀಕ್ಷಿಸಲಾಗಿದೆ. ಒಟ್ಟು ಆದಾಯ 1.10 ಕೋಟಿ ರೂಗಳಲ್ಲಿ ವೇತನ ಮತ್ತು ವಿದ್ಯುತ್‌ ಅನುದಾನ ಹೊರತುಪಡಿಸಿ, ಉಳಿದ 6.65 ಕೋಟಿ ರೂಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ, ಘನತ್ಯಾಜ್ಯ ವಸು ನಿರ್ವಹಣೆಗೆ ಆಟೋ ಟಿಪ್ಪರ್‌ಗಳ ಖರೀದಿ, ಬೀದಿದೀಪ ಖರೀದಿ ಸೇರಿದೆ. ಒಟ್ಟು 1.54 ಕೋಟಿ ಮುನ್ಸಿಪಲ್‌ ಆದಾಯದಲ್ಲಿ ನೀರಿನ ಕರ 52 ಲಕ್ಷ, ಎಸ್‌ಎಎಸ್‌ 33 ಲಕ್ಷ, ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಶುಲ್ಕ 4.60 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ 18.06 ಲಕ್ಷ, ಟ್ರೇಡ್‌ ಲೈಸನ್ಸ್‌ 2.50 ಲಕ್ಷ, ಮೀನು ಮಾರುಕಟ್ಟೆಯಿಂದ 5 ಲಕ್ಷ, ತರಕಾರಿ ಮಾರುಕಟ್ಟೆ ಫೀ 6.50 ಲಕ್ಷ ರೂ ಸೇರಿದೆ.
ಒಟ್ಟು ಖರ್ಚು 1.50 ಕೋಟಿ ರೂಗಳಲ್ಲಿ ಆಡಳಿತಾತ್ಮಕ ಖರ್ಚು 44 ಲಕ್ಷ ಸೇರಿ, ಸದಸ್ಯರ ಗೌರವಧನ, ಪ್ರಯಾಣ ವೆಚ್ಚ, ಸಭಾ ವೆಚ್ಚ 12 ಲಕ್ಷ ರೂ, ಹೊರಗುತ್ತಿಗೆ ವಾಲ್‌ಮೆನ್‌ ಹಾಗೂ ಲೋಡರ್ಸ್‌ ನೌಕರರ ವೆಚ್ಚ 51 ಲಕ್ಷ ರೂ, ಇಂಧನ ವೆಚ್ಚ, ವಾಹನ ದುರಸ್ತಿಗೆ 18.36 ಲಕ್ಷ, ಬ್ಲಿಚಿಂಗ್‌ ಆಲಂ ಮತ್ತು ಕ್ರಿಮಿನಾಶಕ ಖರೀದಿಗೆ 5 ಲಕ್ಷ, ಜಾಹೀರಾತು ಪ್ರಚಾರ ವೆಚ್ಚ 7 ಲಕ್ಷ, ನಗರ ಬಡತನ ನಿರ್ಮೂಲನೆ, ಸಮಾಜ ಕಲ್ಯಾಣ, ಎಸ್‌ಸಿ,ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ನಿಧಿ 2 ಲಕ್ಷ, ರಸ್ತೆ ಮತ್ತು ಚರಂಡಿ, ಮೀನು ಮಾರುಕಟ್ಟೆ ದುರಸ್ತಿಗೆ 7 ಲಕ್ಷ, ವಾಹನ ಬಾಡಿಗೆಗೆ 4 ಲಕ್ಷ ರೂ ಅಂದಾಜಿಸಲಾಗಿದೆ. ಒಟ್ಟು 1.54 ಕೋಟಿ ರೂ ಆದಾಯದಲ್ಲಿ ಖರ್ಚು 1.50 ಲಕ್ಷ ಇದ್ದು, 4.37 ಲಕ್ಷ ಉಳಿತಾಯದ ಬಜೆಟ್‌ ಇದಾಗಿದೆ ಎಂದು ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾನಿ ವಿವರಿಸಿದರು.
ಜಾತ್ರೆಯಲ್ಲಿ ಗಾಂಧಿ ಸರ್ಕಲ್‌ ಬಳಿ ರಸ್ತೆ ಮೇಲೆ ಅಂಗಡಿಗೆ ಅವಕಾಶ ನೀಡಬಾರದೆಂದು ಪೂರ್ವಭಾವಿ ಸಭೆಯಲ್ಲಿ ಠರಾವು ಮಾಡಿದ್ದರೂ, ಅದನ್ನು ಮೀರಿ ಅಂಗಡಿಗೆ ಅವಕಾಶ ನೀಡಿದ್ದೇಕೆಂದು ಸದಸ್ಯ ಯೋಗೇಶ ಹಿರೇಮಠ ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷ ಶಿರೀಷ ಪ್ರಭು, ಸ್ಥಳೀಯ ಅಂಗಡಿಕಾರರು ಅಂಗಡಿ ಹಾಕಲು ಅವಕಾಶ ನೀಡುವಂತೆ ಒತ್ತಡ ತಂದಿದ್ದು, ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಸ್ಥಳೀಯರು ಎನ್ನುವ ಕಾರಣಕ್ಕೆ ಮಾನವೀಯ ನೆಲೆಯಲ್ಲಿ ಅವಕಾಶ ನೀಡಲಾಯಿತೆಂದು ಸಮಜಾಯಿಷಿ ನೀಡಿದರು.ಉಪಾಧ್ಯಕ್ಷೆ ಬಶೀರಾ ಬೇಗಂ,ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ನಾಯ್ಕ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

loading...